ಮಂಜೇಶ್ವರ: ಆಲ್ ಕೇರಳ ಫೆÇಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಉಪ್ಪಳ ಘಟಕದ 9ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ರಚನೆ ಹೊಸಂಗಡಿ ಹಿಲ್‍ಸೈಡ್ ಆಡಿಟೋರಿಯಂ ನಲ್ಲಿ ನಡೆಯಿತು.
ಎ.ಕೆ.ಪಿ.ಎ. ಉಪ್ಪಳ ಘಟಕದ ಅಧ್ಯಕ್ಷ ಜೀಯಾದ್ ಅಬ್ದುಲ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟನೆಯ ವಲಯ ಸಮಿತಿ ಅಧ್ಯಕ್ಷ ಗೋವಿಂದನ್ ಚಂಗರಕಾಡ್ ದೀಪ ಬೆಳಗಿಸಿ ಉದ್ಘಾಟಿಸಿ ಸಂಘಟನೆಯ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರಶಾಂತ್ ತೈಕಡಪುರಂ, ರಾಜ್ಯ ಸಮಿತಿ ಸದಸ್ಯ ಭರತನ್, ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಪಾಲಕುನ್ನು, ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ರೀಜಿತ್ ನಿಲಾಯ್, ಕೋಶಾಧಿಕಾರಿ ಮನೋಹರ್, ಜಿಲ್ಲಾ ಸಮಿತಿ ಸದಸ್ಯ ಸುದರ್ಶನ್, ವಲಯ ಸಮಿತಿ ಕಾರ್ಯದರ್ಶಿ ಚಂದ್ರಮೋಹನ್, ಉಪ್ಪಳ ಘಟಕದ ಮೇಲ್ವಿಚಾರಕ ಸುಕು ಶುಭಾಂಶನೆಗೈದರು. ಸುನಿಲ್ ಕುಮಾರ್, ಅಶೋಕ್ ಶೆಟ್ಟಿ, ಉಪ್ಪಳ ಘಟಕದ ಉಪಾಧ್ಯಾಕ್ಷ ನವಾಜ್ ಉಪಸ್ಥಿತರಿದ್ದರು.
ಉಪ್ಪಳ ಘಟಕದ ಕಾರ್ಯದರ್ಶಿ ಸುರೇಶ್ ಆಚಾರ್ಯ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ವಿಜಯನ್ ಕೆ.ನಾಯರ್ ಲೆಕ್ಕಪತ್ರ ಮಂಡಿಸಿದರು. ರವೀಂದ್ರ ಆಚಾರ್ಯ ಪ್ರತಾಪನಗರ ವಂದಿಸಿದರು. ಸಂಘಟನೆಯ ಉಪ್ಪಳ ಘಟಕದ ನೂತನ ಪದಾಧಿಕಾರಿಗಳಾಗಿ ಸುನಿಲ್ ಕುಮಾರ್(ಅಧ್ಯಕ್ಷ), ರಾಜೇಶ್ ತೂಮಿನಾಡು(ಉಪಾಧ್ಯಕ್ಷ), ಸುರೇಶ ಆಚಾರ್ಯ(ಕಾರ್ಯದರ್ಶಿ) ಪುನಾರಾಯ್ಕೆಗೊಂಡರು. ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ, ಕೋಶಾಧಿಕಾರಿಯಾಗಿ ರೀಯಾಸ್ ಹಾಗೂ ಸದಸ್ಯರುಗಳಾಗಿ ಜಿಯಾದ್ ಅಬ್ದುಲ್ಲ, ವಿಜಯನ್ ಕೆ.ನಾಯರ್, ಸುದರ್ಶನ್, ರವೀಂದ್ರ ಆಚಾರ್ಯ ಪ್ರತಾಪನಗರ, ನವಾಜ್, ಪ್ರವೀಣ ರೈ, ಪ್ರಕಾಶ್, ಫ್ರಾನ್ಸಿಸ್ ಸದಸ್ಯರಾಗಿ ಆಯ್ಕೆಯಾದರು.


