ಮಂಜೇಶ್ವರ: ಪಾತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬವನ್ನು ಸರಳವಾಗಿ ಶುಕ್ರವಾರ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರೋಗ್ಯ ಇಲಾಖೆಯ ಸಿಸ್ಟರ್ ರಣಿತ ಮತ್ತು ಸಿಸ್ಟರ್ ಶೆರೀಫ ದೀಪ ಬೆಳಗಿಸಿ ಓಣಂ ಹಬ್ಬಕ್ಕೆ ಚಾಲನೆ ನೀಡಿ ಹಬ್ಬ ನಮ್ಮ ಸಾಮಾಜಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದು ತಿಳಿಸಿದರು.
ಬಳಿಕ ಮಕ್ಕಳಿಗೆ ಹಾಗೂ ರಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ರಕ್ಷಕರು ಬಹಳ ಉತ್ಸಾಹದಿಂದ ಭಾಗವಹಿಸಿದರು. ಮಧ್ಯಾಹ್ನ ಓಣಂ ಔತಣವನ್ನು ಮಕ್ಕಳು ಅಧ್ಯಾಪಕರು ರಕ್ಷಕರೊಂಡಿಗೆ ಕುಳಿತು ಸವಿದರು.
ಬಳಿಕ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಜೀಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯೋಪಾಧ್ಯಾಯ ಪದ್ಮನಾಭ ಮಾಸ್ತರ್, ಅಧ್ಯಾಪಕರಾದ ಉಸ್ಮಾನ್ ಮಾಸ್ತರ್, ಜಯಂತ ಮಾಸ್ತರ್, ಗಿರಿಜಾ ಟೀಚರ್, ಜೈನಬಾ ಟೀಚರ್, ಜಲಜಾಕ್ಷಿ ಟೀಚರ್, ಸುಂದರ, ಸರಸ್ವತಿ ಉಪಸ್ಥಿತರಿದ್ದರು. ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


