ಮಂಜೇಶ್ವರ: ಅಡಕಳಕಟ್ಟೆ ಮಿತ್ರ ವೃಂದ ಗ್ರಂಥಾಲಯ ಮತ್ತು ವಾಚನಾಲಯದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಊರಿನ ಹಿರಿಯ ನಿವೃತ್ತ ಅಧ್ಯಾಪಕರಾದ ಪದ್ಮನಾಭ ಮಾಸ್ತರ್ ಹಾಗೂ ಕಿಟ್ಟಣ್ಣ ಮಾಸ್ತರ್ ಅವರಿಗೆ ಅವರ ಮನೆಗೆ ತೆರಳಿ ಗೌರವ ಸಲ್ಲಿಸಲಾಯಿತು. 92 ನೇ ಹುಟ್ಟುಹಬ್ಬ ಆಚರಿಸಿದ ಪದ್ಮನಾಭ ಮಾಸ್ತರ್ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಿಟ್ಟಣ್ಣ ಮಾಸ್ತರ್ ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡರು. ಹಿರಿಯ ಆದರ್ಶ ವ್ಯಕ್ತಿತ್ವಗಳನ್ನು ಕಂಡು ಮಾತನಾಡಿಸಿ ಕುಶಲೋಪರಿ ನಡೆಸಿದ ದಿನಾಚರಣೆ ಸಾರ್ಥಕ ವೆನಿಸಿತು.
ಅಡಕಳಕಟ್ಟೆ ವಾಚನಾಲಯದಲ್ಲಿ ಶಿಕ್ಷಕರ ದಿನಾಚರಣೆ-ಗೌರವಾಭಿನಂದನೆ
0
ಸೆಪ್ಟೆಂಬರ್ 07, 2019