ಮಂಜೇಶ್ವರ: ಉದ್ಯಾವರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಭ್ರಮದ ಓಣಂ ಆಚರಿಸಲಾಯಿತು.
ಆಕರ್ಷಕ ಹೂವಿನ ರಂಗೋಲಿಯನ್ನು ರಚಿಸಿ ಮಹಾಬಲಿಯನ್ನು ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಿಂದ ತಿರುವಾದಿರ ನೃತ್ಯ ಜರಗಿತು. ಆಕರ್ಷಕ ಮೆರವಣಿಗೆಯಲ್ಲಿ ಕೇರಳದ ಸಂಸ್ಕøತಿಯನ್ನು ಬಿಂಬಿಸುತ್ತಾ ಜನರ ಕ್ಷೇಮ ಸಮಾಚಾರವನ್ನು ಮಹಾಬಲಿ ಕೇಳಿ ಅರಿತರು. ಮಹಾಬಲಿಯಾಗಿ ನಾಲ್ಕನೇ ತರಗತಿಯ ಆದಿತ್ಯ ಶೆಟ್ಟಿಗಾರ್, ವಾಮನನಾಗಿ ಲಕ್ಷಿತ್ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಶಾಲಾ ಮುಖ್ಯ ಶಿಕ್ಷಕಿ ಆಶಾಲತಾ ಶುಭಹಾರೈಸಿದರು. ಶಿಕ್ಷಕ ವೃಂದ, ರಕ್ಷಕ ಸಂಘ ಮತ್ತು ಸ್ಥಳೀಯರು ಸಹಕರಿಸಿದರು.


