ಬದಿಯಡ್ಕ: ಅಗಲ್ಪಾಡಿಯ ಉಪ್ಪಂಗಳ ಟ್ರಸ್ಟ್ ಇದರ ಆಶ್ರಯದಲ್ಲಿ ಮಂಗಳೂರಿನ ಫೇಮ್ ಎಡ್ವೆಂಚರ್ ಅಕಾಡೆಮಿಯ ವತಿಯಿಂದ ಉಪ್ಪಂಗಳದಲ್ಲಿ ಎರಡು ದಿನಗಳ ಸಾಹಸ ಶಿಬಿರ ಇತ್ತೀಚೆಗೆ ನಡೆಯಿತು.
ಖ್ಯಾತ ಉದ್ಯಮಿ, ದಾನಿ ಅಂಕುರ್ ಎಂಟರ್‍ಪ್ರೈಸಸ್ ಬದಿಯಡ್ಕ ಇದರ ಮಾಲಕ ನಿತ್ಯಾನಂದ ಶೆಣೈ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ.ವೇಣು ಕಳೆಯತ್ತೋಡಿ ಮಾತನಾಡಿ ಬೆಟ್ಟದ ಮೇಲಿನಿಂದ ಸೆಲ್ಪಿ ತೆಗೆಯುವವರು ಇಂತಹ ಸಾಹಸ ಶಿಬಿರದಲ್ಲಿ ಭಾಗವಹಿಸುವುದು ಉತ್ತಮ ಎಂದರು. ಫೇಮ್ ಎಡ್ವೆಂಚರ್‍ನ ವೇಣು ಶರ್ಮಾ ಮಾತನಾಡಿ ಪ್ರಳಯ, ಗುಡ್ಡೆ ಜರಿತ ಮೊದಲಾದ ಪ್ರಾಕೃತಿಕ ವಿಕೋಪಗಳು ಸಂಭವಿಸುವಾಗ ಈ ಶಿಬಿರಗಳಿಂದ ಪರಿಣತಿ ಪಡೆದವರು ಇತರರನ್ನು ರಕ್ಷಿಸಬಹುದು ಎಂದರು.
ಸಾಹಸಗಳ ಪರಿಣತ ಸಂತೋಷ್ ಪೀಟರ್ ಡಿ'ಸೋಜ, ನಿತಿನ್, ಸುಹಾನ್, ಕೃಷ್ಣ ಭಟ್ ಉಪ್ಪಂಗಳ, ಬಾಲಗೋಪಾಲ ಶರ್ಮಾ, ರಾಜು ಶರ್ಮಾ, ಪುತ್ತೂರು ಮುಳಿಯದ ಪ್ರಬಂಧಕ ಯುವಕರು ಹಾಗು ಇತರರು ಸಾಹಸ ಶಿಬಿರದಲ್ಲಿ ಭಾಗವಹಿಸಿದರು.


