ಮಧೂರು: ಮಧೂರು ಗ್ರಾಮ ಪಂಚಾಯತಿ ವಿವೇಕಾನಂದ ನಗರದ ಅಂಗನವಾಡಿಯಲ್ಲಿ ವಿವೇಕಾನಂದ ಮಾತೃ ಸಮಿತಿಯ ವತಿಯಿಂದ ಓಣಂ ಹಬ್ಬವನ್ನು ಆಚರಿಸಲಾಯಿತು.
ಪುಟಾಣಿಗಳಿಗೆ ಹಾಗು ಮಾತೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮಧೂರು ಗ್ರಾಮ ಪಂಚಾಯತಿ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಅವಿನ್ ಎಸ್. ಅವರು ಬಹುಮಾನ ವಿತರಿಸಿದರು. ಮಧ್ಯಾಹ್ನ ಓಣಂ ಸದ್ಯ (ಭೂರಿ ಭೋಜನ) ಬಡಿಸಲಾಯಿತು.

