ಕಾಸರಗೋಡು: ವಿಶ್ವಕರ್ಮ ಜಯಂತಿ ದಿನವನ್ನು ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನಾಗಿ ಬಿ.ಎಂ.ಎಸ್. ಕಾಸರಗೋಡಿನಲ್ಲಿ ಮಂಗಳವಾರ ಆಚರಿಸಲಾಯಿತು.
ನಗರದ ಕರಂದಕ್ಕಾಡ್‍ನಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಬಿ.ಎಂ.ಎಸ್. ರಾಜ್ಯ ಕಾರ್ಯದರ್ಶಿ ಇ.ದಿವಾಕರನ್ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ನಗರ ಬಿ.ಎಂ.ಎಸ್. ಅಧ್ಯಕ್ಷ ಕಮಲಾಕ್ಷ ಪಿ. ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ನೇತಾರರಾದ ಪಿ.ವಿ.ಸತ್ಯನಾಥ್, ಅನಿಲ್ ಬಿ.ನಾಯರ್, ಬಾಲಕೃಷ್ಣ ಸುವರ್ಣ ಮೊದಲಾದವರು ಶುಭಹಾರೈಸಿದರು.
ಮನೀಶ್, ಶಿವನ್, ಎಂ.ಬೇಬಿ, ನವೀನ್, ಬಾಲಕೃಷ್ಣ ಶೆಟ್ಟಿ, ಕುಸುಮಾಕರ ರಾವ್, ಸುಂದರ ಪೂಜಾರಿ, ಸಚಿನ್ ಮೊದಲಾದವರು ಕಾಸರಗೋಡು ನಗರಸಭಾ ಕಚೇರಿ ಪರಿಸರದಿಂದ ಆರಂಭಿಸಿದ ಮೆರವಣಿಗೆಗೆ ನೇತೃತ್ವ ನೀಡಿದರು. ಮೆರವಣಿಗೆ ಕರಂದಕ್ಕಾಡ್‍ನಲ್ಲಿ ಸಂಪನ್ನಗೊಂಡಿತು. ಬಾಬು ಮೋನ್ ಸ್ವಾಗತಿಸಿದರು. ರಿಜೇಶ್ ವಂದಿಸಿದರು.


