ಮಧೂರು: ಮಧೂರು ಸರ್ಕಾರಿ ಕಿರಿಯ ಬುನಾದಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಸೆ.22 ರಂದು ಶಾಲಾ ಪರಿಸರದಲ್ಲಿ ಹಳೆ ವಿದ್ಯಾರ್ಥಿ ಕುಟುಂಬ ಸಂಗಮ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಯು.ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮಧೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಿವಾಕರ ಆಚಾರ್ಯ ಉದ್ಘಾಟಿಸುವರು. 10 ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.
ಸಂಜೆ 4 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಮಧೂರು ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ದೀಪ ಪ್ರಜ್ವಲಿಸಿ ಅನುಗ್ರಹ ಭಾಷಣ ಮಾಡುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಶಾಸಕ ಎನ್.ಎ.ನೆಲ್ಲಿಕುನ್ನು, ಮಧೂರು ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಬ್ಲಾಕ್ ಪಂಚಾಯತಿ ಸದಸ್ಯ ಪ್ರಭಾಶಂಕರ ಮಾಸ್ತರ್, ಮಧೂರು ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಪುಷ್ಪಾ, ಸದಸ್ಯರಾದ ಯೋಗೀಶ್ ಎಂ.ಆರ್, ಮೈಮೂನ ಅಬ್ಬಾಸ್, ಶಾಲಾ ಮುಖ್ಯೋಪಾಧ್ಯಾಯ ಬಿ.ವಿನೋದ್ ಕುಮಾರ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಬಿ.ಬಾಲಕೃಷ್ಣ ಅಗ್ಗಿತ್ತಾಯ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ವರ ಹೊಳ್ಳ, ಮಾತೃ ಸಂಘದ ಅಧ್ಯಕ್ಷೆ ಪ್ರಸನ್ನ, ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಭಟ್, ಎಂ.ಸೀತಾರಾಮ, ಮಧೂರು ಸಹಕಾರಿ ಬ್ಯಾಂಕ್ ಅಧ್ಯಕ್ಷ ನಾರಾಯಣಯ್ಯ, ಮಿತ್ರ ಕಲಾವೃಂದ ಅಧ್ಯಕ್ಷ ವಿನೋದ್ ಕುಮಾರ್, ತರುಣ ಕಲಾವೃಂದ ಕಾರ್ಯದರ್ಶಿ ಚಂದ್ರಶೇಖರ, ಶಿವಾಜಿ ಕಲಾ ಸಂಘ ಅಧ್ಯಕ್ಷ ಅವಿನಾಶ್ ಕೋರ್ಜಾಲ್, ಸುಹೂರ್ತ್ ವೇದಿ ಅಧ್ಯಕ್ಷ ಶರೀಫ್ ಪಳ್ಳಕೋಡ್ ಶುಭಹಾರೈಸುವರು.

