ಕಾಸರಗೋಡು: ಸೇವಾ ಶುಲ್ಕಗಳಿಗೆ ಸಂಬಂಧಿಸಿ ಪ್ರಕಟಿಸಲಾದ ಪಟ್ಟಿಗಳನ್ನು ಅಕ್ಷಯ ಕೇಂದ್ರಗಳು ಪಾಲಿಸಬೇಕು. ಅತಿ ಶುಲ್ಕ ಈಡುಮಾಡುವ ಅಕ್ಷಯ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದವರು ಆದೇಶದಲ್ಲಿ ತಿಳಿಸಿದ್ದಾರೆ.
ಕೆಲವು ಅಕ್ಷಯ ಕೇಂದ್ರಗಳಲ್ಲಿ ಅತಿ ಶುಲ್ಕ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ಆದೇಶ ಜಾರಿಗೊಳಿಸಲಾಗಿದೆ. ಈ ಸಂಬಂಧ ನೇರವಾಗ ಯಾ ದೂರವಾಣಿ ಮೂಲಕ ಸಾರ್ವಜನಿಕರು ದೂರು ಸಲ್ಲಿಸಬಹುದು.
ಸಾರ್ವಜನಿಕರಿಂದ ದುಬರಿ ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಕ್ಷಯ ಯೋಜನೆ ನಿರ್ದೇಶಕರು ಇಂಥಾ ಕೇಂದ್ರಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮಾಡಲು 2018ರಲ್ಲಿ ರಾಜ್ಯ ಸರಕಾರಕ್ಕೆ ಪತ್ರ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲೆಕ್ಟ್ರಾನಿಕ್ಸ್ -ಮಾಹಿತಿ ತಂತ್ರ????ನ ಇಲಾಖೆ 2018ಮೇ 9ರಂದು ಸೇವೆಗಳ ಶುಲ್ಕ ನಿಗದಿ ಪಡಿಸಿದ ಪಟ್ಟಿಗಳನ್ನು ಸಿದ್ಧಪಡಿಸಿತ್ತು. ಇದನ್ನು 2019ರಲ್ಲಿ ನವೀಕರಿಸಲಾಗಿತ್ತು. ಈ ಪಟ್ಟಿಯ ಕ್ರಮ ಕೆಳಗಿನಂತಿವೆ.
ಇ-ಡಿಸ್ಟ್ರಿಕ್ಟ್ ಸೇವೆಗಳು-ಸಾಮಾನ್ಯ ವಿಭಾಗಕ್ಕೆ-25 ರೂ., ಆದ್ಯತೆ ಪಟ್ಟಿಯ ಪಡಿತರ ಚೀಟಿ ಹೊಂದಿರುವವರಿಗೆ 20 ರೂ.(ಎರಡು ವಿಭಾಗದವರಿಗೂ ಸ್ಕ್ಯಾ ನಿಂಗ್/ ಪ್ರಿಂಟಿಂಗ್ ಪೇಜ್ ಒಂದಕ್ಕೆ ತಲಾ 3 ರೂ. ಇದರಿಂದ ಹೊರತಾಗಿದೆ.), ಯುಟಿಲಿಟಿ ಬಿಲ್ ಪೇಮೆಂಟ್ ಗಳು-ಒಂದು ಸಾವಿರ ರೂ.ವರೆಗೆ 15 ರೂ., ಒಂದು ಸಾವಿರದ ಒಂದು ರೂ.ನಿಂದ 5 ಸಾವಿರ ರೂ.ವರೆಗೆ 25 ರೂ., 5 ಸಾವಿರ ರೂ.ನಿಂದ ಮೇಲ್ಪಟ್ಟು ಮೊತ್ತದ ಶೇ 0.5. ಗುರುತು ಚೀಟಿ ಅರ್ಜಿಯೊಂದಕ್ಕೆ 40 ರೂ.(ಸ್ಕ್ಯಾನಿಂಗ್, ಪ್ರಿಂಟಿಂಗ್ ಸಹಿತ), ಫುಡ್ ಸೇಫ್ಟಿ ನೋಂದಣಿ (ಫಾರಂ.ಎ)-50 ರೂ., ಫಾರಂ-ಬಿ-80ರೂ., ಫುಡ್ ಸೇಫ್ಟಿ ನವೀಕರಣ-ಫಾರಂ-ಎ-25 ರೂ., ಫಾರಂ-ಬಿ-25 ರೂ.(ಪ್ರಿಂಟಿಂಗ್, ಸ್ಕ್ಯಾನಿಂಗ್ ಪೇಜ್ ಒಂದಕ್ಕೆ ತಲಾ ಮೂರು ರೂ. ಇದರಿಂದ ಹೊರತಾಗಿದೆ.), ಇದಲ್ಲದೆ ಅಲ್ಪಸಂಖ್ಯಾತರಿಗೆ ರಾಷಟ್ರೀಯ ಪ್ರೀಮೆಟ್ರಿಕ್ ಸ್ಕಾಲರ್ ಶಿಪ್ ಅರ್ಜಿಗೆ-70 ರೂ.(ಸ್ಕ್ಯಾನಿಂಗ್-ಪ್ರಿಂಟಿಂಗ್ ಪೇಜ್ ಸಹಿತ), ಕೇರಳ ಸರಕಾರದ ವಿದ್ಯಾರ್ಥಿ ವೇತನಕ್ಕೆ-40 ರೂ.(ಪ್ರಿಂಟಿಂಗ್, ಸ್ಕ್ಯಾನಿಂಗ್ ಪೇಜ್ ಗೆ ಮೂರು ರೂ.), ಮುಖ್ಯಮಂತ್ರಿ ದುರಂತ ಪರಿಹಾರ ನಿಧಿ ಅರ್ಜಿಗೆ-20ರೂ.(ಸ್ಕ್ಯಾನಿಂಗ್-ಪ್ರಿಟಂಗ್ ಗೆ ಮೂರು ರೂ.).ಇತ್ಯಾದಿಗಳು. ಎಲ್ಲ ಸೇವೆಗಳನ್ನು ಪಡೆದ ನಂತರ ರಶೀದಿ ಪಡೆದು ಇರಿಸಿಕೊಳ್ಳಬೇಕು.
ಲಭ್ಯ ಉಚಿತ ಸೇವೆಗಳು:
1.ಆಧಾರ್ ಎನ್ರೋಲ್ ಮೆಂಟ್.
2. ಮಕ್ಕಳ ಆಧಾರ್ ಎನ್ರೋಲ್ ಮೆಂಟ್.
3. ಸೂಕ್ತ ಬೆರಳಚ್ಚು ಗುರುತು/ಆಧಾರ್ ಚೀಟಿಯ ಪ್ರಸ್ತುತ ಮಾಹಿತಿ.
4. 5-15 ವರ್ಷ ವಯೋಮಾನದಲ್ಲಿ ಕಡ್ಡಾಯವಾಗಿ ನಡೆಸಬೇಕಾದ ಬಯೋಮೆಟ್ರಿಕ್ ನವೀಕರಣ.
5.ಪರಿಶಿಷ್ಟ ಜಾತಿ ಸಂಬಂಧ ನಿಧಿ ಸೇವೆಗಳು.


