ಕಾಸರಗೋಡು: ಕರಂದಕಾಡು ಶೆಣೈ ಕುಟುಂಬದ ವತಿಯಿಂದ ಪ್ರತೀ ವರ್ಷ ಚೌತಿ ನಡೆಯುತ್ತಿದ್ದು ಈ ಮಹೋತ್ಸವ ಇದೀಗ ಶತಮಾನದ ಗಡಿದಾಟಿ ಸಂವತ್ಸರಗಳೇ ದಾಟಿ ಹೋಗಿದೆ. ಈ ವರ್ಷದ ಚೌತಿ ದಿನ ದಂದು ಕಾಸರಗೋಡಿನ ಖ್ಯಾತ ಸ್ಯಾಕ್ಸೋಫೆÇೀನ್ ವಾದಕ ಪೀಪಲ್ ಫೆÇೀರಂ ಆಫ್ ಇಂಡಿಯಾ ಭಾರತ್ ಸೇವಕ್ ಸಮಾಜ್ ಇದರ ಆಶ್ರಯದಲ್ಲಿರುವ ಇಂಟರ್ ನ್ಯಾಶನಲ್ ವರ್ಚುವಲ್ ಪೀಸ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಉದಯ ಕಾಸರಗೋಡು ಅವರನ್ನು ಶೆಣೈ ಕುಟುಂಬ ವಿಶ್ವಸ್ಥ ಮಂಡಳಿಯಿಂದ ಚೌತಿ ಗಣಪತಿ ವಿರಾಜಮಾನವಾಗಿದ್ದ ಭವ್ಯ ಪರಿಸರದಲ್ಲಿ ಗೌರವದಿಂದ ಸಮ್ಮಾನಿಸಲಾಯಿತು.
ವಿಶ್ವಸ್ಥ ಮಂಡಳಿಯ ಪದಾ„ಕಾರಿ ಎನ್.ಗಣೇಶ್ ಶೆಣೈ ಅವರು ಶಾಲು ಹೊದಿಸಿ ಗಣಪತಿ ಮೂರ್ತಿ ಜತೆ ಫಲ ತಾಂಬೂಲ ನೀಡಿ ಡಾ.ಉದಯ ಕಾಸರಗೋಡು ಅವರನ್ನು ಸಮ್ಮಾನಿಸಿದರು. ಶೆಣೈ ಕುಟುಂಬದ ಸದಸ್ಯರಾದ ಎನ್.ವೆಂಕಟೇಶ ಶೆಣೈ, ಎನ್.ಶ್ರೀನಿವಾಸ ಶೆಣೈ, ಎನ್.ನರಸಿಂಹ ಶೆಣೈ ಈ ವೇಳೆ ಉಪಸ್ಥಿತರಿದ್ದರು.
ಉದಯ ಕಾಸರಗೋಡು ಅವರು ಶೆಣೈ ಕುಟುಂಬದ ಚೌತಿ ಗಣಪತಿ ಪ್ರತಿಷ್ಠಾಪನೆಗಾಗಿ ತರಲಾಗುವ ವಿಗ್ರಹ ಮೆರವಣಿಗೆ ವೇಳೆ ಸ್ಯಾಕ್ಸೋಫೆÇೀನ್ ನುಡಿಸುವ ಸೇವೆ ಅನೇಕ ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಈ ಗೌರವಾರ್ಥ ಅವರನ್ನು ಸಮ್ಮಾನಿಸಲಾಯಿತು.


