ಮಂಜೇಶ್ವರ: ಕುಂಜತ್ತೂರು ಸರ್ಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಸ್ಟುಡೆಂಟ್ ಪೆÇಲೀಸ್ ಕೆಡೆಟ್‍ನ ಓಣಂ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಕಾಸರಗೋಡು ಜಿಲ್ಲಾ ಪಂ.ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶಿಶ್ತನ್ನು ಕಲಿಸುವುದರೊಂದಿಗೆ ಪೆÇಲೀಸ್ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಲು ಸರ್ಕಾರ ಹಮ್ಮಿಕೊಂಡ ಪೆÇಲೀಸ್ ಸ್ಟುಡೆಂಟ್‍ಗೆ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗತ್ತಿರುವುದು ಸಂತೋಷದ ವಿಷಯ. ಆದರೆ ಇತ್ತೀಚೆಗೆ ಶಿಶ್ತನ್ನು ಕಲಿಸಬೇಕಾದ ಅಧ್ಯಾಪಕರುಗಳೇ ಕೆಲವೊಂದು ಶಾಲೆಗಳಿಗೆ ತಡವಾಗಿ ಆಗಮಿಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ನೋಡಿ ತುಂಬಾ ಬೇಸರವಾಯಿತು. ಇದು ಮುಂದುವರಿಯಬಾರದು. ಹಾಗೇನಾದರೂ ಮುಂದುವರಿದರೆ ಅಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಇಲ್ಲವಾಗಬಹುದೆಂದು ಸೂಚನೆ ನೀಡಿದರು.
ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ. ಅಧ್ಯಕ್ಷತೆ ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಂ.ಸಿ. ಸದಸ್ಯ ಈಶ್ವರ ಮಾಸ್ತರ್, ಶಿಕ್ಷಕರಾದ ದಿನೇಶ್, ಅನಿತಾ, ಕನಕ, ಪ್ರಮೀಳಾ ಮೊದಲಾದವರು ಮಾತನಾಡಿದರು. ಶಿಬಿರ ಮೂರುಗಳ ಕಾಲ ನಡೆಯಲಿದೆ. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ವಿಶೇಷ ತರಗತಿಗಳನ್ನು ನೀಡಲಾಗುತ್ತದೆ.


