HEALTH TIPS

ವಿವಿಧೆಡೆ ಓಣಂ ಸಂಭ್ರಮ=ಚಿತ್ರ ಸುದ್ದಿಗಳು

       
   ಸಮರಸ ಚಿತ್ರ ಸುದ್ದಿ:  ಕುಂಬಳೆ: ಓಣಂ ಹಬ್ಬದ ಅಂಗವಾಗಿ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ರಚಿಸಲಾದ ಹೂವಿನ ರಂಗೋಲಿ.
...............................................................................................................................................................................................
    ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೀಕಾನದ ಆರ್.ಆರ್.ಎಂ.ಜಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬದ ಪ್ರಯುಕ್ತ ಮಕ್ಕಳಿಗೆ, ಹೆತ್ತವರಿಗೆ ಮತ್ತು ಅಧ್ಯಾಪಕರಿಗೆ ವಿವಿಧ ರೀತಿಯ ಸ್ಪರ್ಧೆಗಳು ಜರಗಿತು. ರಂಗೋಲಿ ಹಾಗು ಓಣಂ ಔತಣವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
.................................................................................................................................................................................................
    ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮಜಿಬೈಲು ಕೂಡ್ಡೆ ಅಂಗನವಾಡಿಯಲ್ಲಿ ಓಣಂ ಆಚರಣೆಯನ್ನು ಪೂಕಳಂ ಬಿಡಿಸಿ ಆಚರಿಸಲಾಯಿತು.
....................................................................................................................................................................................................................
    ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕಾಸರಗೋಡು ತಾಲೂಕು ಕಚೇರಿಯಲ್ಲಿ ಓಣಂ ಹಬ್ಬದ ಅಂಗವಾಗಿ ರಚಿಸಿದ ಹೂವಿನ ರಂಗೋಲಿ `ಪೂಕಳಂ'. ತಹಶೀಲ್ದಾರ್ ಎಸ್.ಐ.ಅನಿತಾ ನೇತೃತ್ವ ನೀಡಿದರು.
.....................................................................................................................................................................................................................
         ಸಮರಸ ಚಿತ್ರ ಸುದ್ದಿ: ಕಾಸರಗೋಡು: ಸಕ್ಷಮ ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ಓಣಂ ಹಬ್ಬದ ಅಂಗವಾಗಿ ಆಯೋಜಿಸಿದ ಓಣಂ ಕಿಟ್ ವಿತರಣೆ ಮತ್ತು ನೇತ್ರದಾನ ಕುರಿತಾದ ತರಗತಿಯನ್ನು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು.
...........................................................................................................................................................................................................................
          ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಓಣಂ ಹಬ್ಬದ ಪ್ರಯುಕ್ತ ಮಂಜೇಶ್ವರದ ಸ್ಪೂರ್ತಿ ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಕಿಯರು ಹಾಗು ಮಕ್ಕಳಿಂದ ರಚಿಸಲ್ಪಟ್ಟ `ಪೂಕಳಂ'. ಶಾಲಾ ವ್ಯವಸ್ಥಾಪಕರಾದ ಮಧುಸೂದನ ಬಳ್ಳಕ್ಕುರಾಯ ಉಪಸ್ಥಿತರಿದ್ದರು.
...................................................................................................................................................................................................................................................................


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries