ಕಾಸರಗೋಡು: ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಪ್ರಕಾರ ಕೇರಳ ರಸ್ತೆ ಸಾರಿಗೆ ನಿಗಮ(ಕೆಎಸ್‍ಆರ್‍ಟಿಸಿ)ದಲ್ಲಿ ದುಡಿಯುತ್ತಿದ್ದ 2230 ತಾತ್ಕಾಲಿಕ ಚಾಲಕರನ್ನು ಸೇವೆಯಿಂದ ವಜಾಗೈಯ್ಯಲಾಗಿದ್ದು, ಅದು ರಾಜ್ಯ ದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸೇವೆಗಳನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸುವುದರ ಜೊತೆಗೆ ಜನರಿಗೆ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಒಟ್ಟು 5312 ಕೆಎಸ್‍ಆರ್‍ಟಿಸಿ ಸೇವೆಗಳಿದ್ದು, ಅದರಲ್ಲಿ 580 ಸೇವೆಗಳನ್ನು ರದ್ದುಗೊಳಿಸಬೇಕಾಗಿ ಬಂದಿತ್ತು. ಕೆಲವು ಜಿಲ್ಲೆಗಳಲ್ಲಿ ರಜೆಯಲ್ಲಿರುವ ಚಾಲಕರು ಮತ್ತು ಇತರ ಚಾಲಕರಿಗೆ ಹೆಚ್ಚುವರಿ ಸೇವೆ ನೀಡಿ ಗುರುವಾರ ಬಸ್ ಸೇವೆಯನ್ನು ಬಹುತೇಕ ನಿಯಂತ್ರಿಸಲಾಗಿತ್ತು. ಆದರೆ ಹೆಚ್ಚುವರಿ ಸೇವೆ ಮಾಡಿದ ಚಾಲಕರು ಶುಕ್ರವಾರವೂ ಕರ್ತವ್ಯಕ್ಕೆ ಹಾಜರಾಗದೆ ಇರುವುದರಿಂದ ಅದು ಇನ್ನಷ್ಟು ಹೆಚ್ಚು ಬಸ್ಸು ಸೇವೆ ಮೊಟಕುಗೊಳ್ಳಲು ಕಾರಣವಾಗಿದೆ. ಇದರಿಂದಾಗಿ ಈಗಾಗಲೇ ಶೇಕಡ 25ರಷ್ಟು ಬಸ್ ಸೇವೆ ಮೊಟಕುಗೊಂಡಿದೆ.
ಕೆಎಸ್‍ಆರ್‍ಟಿಸಿಯಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ ಚಾಲಕರು ಮತ್ತು ನಿರ್ವಾಹಕರನ್ನು ವಜಾಗೈಯ್ಯುವಂತೆ ಹೈಕೋರ್ಟ್ ಈ ಹಿಂದೆಯೇ ಆದೇಶ ನೀಡಿತ್ತು. ಅದರಂತೆ ತಾತ್ಕಾಲಿಕ ಸಿಬ್ಬಂದಿಗಳನ್ನು ವಜಾಗೈಯ್ಯಲಾಗಿದ್ದರೂ ವಜಾಗೈಯ್ಯಲಾಗಿದ್ದ ಚಾಲಕರನ್ನು ದಿನ ವೇತನ ಆಧಾರದಲ್ಲಿ ಬಳಿಕ ನೇಮಿಸಲಾಗಿತ್ತು. ಈ ಕ್ರಮದ ವಿರುದ್ಧ ಲೋಕಸೇವಾ ಆಯೋಗದ ರ್ಯಾಂಕ್ ಹೋಲ್ಡರ್ ಅಸೋಸಿಯೇಶನ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಎಲ್ಲಾ ತಾತ್ಕಾಲಿಕ ಸಿಬ್ಬಂದಿಗಳನ್ನು ಪೂರ್ಣವಾಗಿ ಹೊರತು ಪಡಿಸುವಂತೆ ಕಠಿಣ ಆದೇಶ ನೀಡಿತ್ತು. ಅದರಂತೆ 2230 ತಾತ್ಕಾಲಿಕ ಚಾಲಕರನ್ನು ಕೆಎಸ್‍ಆರ್‍ಟಿಸಿ ಸೇವೆಯಿಂದ ವಜಾಗೈದಿದೆ.
ಕೆಎಸ್‍ಆರ್‍ಟಿಸಿಯಲ್ಲಿ ಒಂದೇ ಬಾರಿ ಇಷ್ಟೊಂದು ಸಂಖ್ಯೆಯಲ್ಲಿ ಚಾಲಕರನ್ನು ಸೇವೆಯಿಂದ ಹೊರತುಪಡಿಸಿರುವುದು ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮಾತ್ರವಲ್ಲದೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದ ಪ್ರಯಾಣಿಕರು ಹೆಚ್ಚಿನ ಸಂಕಷ್ಟ ಅನುಭವಿಸುವಂತಾಗಿದೆ.
ಕಾಸರಗೋಡು ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಈಗಾಗಲೇ 47 ಚಾಲಕರ ಹುದ್ದೆಗಳು ತೆರವು ಬಿದ್ದಿದೆ. ಆದರೆ ಅದಕ್ಕೆ ಈ ತನಕ ಖಾಯಂ ಚಾಲಕರನ್ನು ನೇಮಕಾತಿ ನಡೆದಿಲ್ಲ. ತಾತ್ಕಾಲಿಕ ಚಾಲಕರ ಸೇವೆ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಡಿಪ್ಪೋದಿಂದ ಚಂದ್ರಗಿರಿ ರೂಟಿನಲ್ಲಿ -2, ಪಾಣತ್ತೂರು ರೂಟ್‍ನಲ್ಲಿ -2 ಮತ್ತು ಚಿತ್ತಾರಿಕಲ್ ರೂಟ್‍ನಲ್ಲಿ -1 ಕೆಎಸ್‍ಆರ್‍ಟಿಸಿ ಸೇವೆ ಮೊಟಕುಗೊಳಿಸಬೇಕಾಗಿ ಬಂದಿದೆ. ಹೊಸದುರ್ಗ ಸಬ್ ಡಿಪೋದಿಂದಲೂ ಎರಡು ಬಸ್ ಸೇವೆ ಮೊಟಕುಗೊಳಿಸಲಾಗಿದೆ. ಇತರ ಜಿಲ್ಲೆಗಳ ಹಾಗೆ ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ಸೇವೆಗಳ ಮೇಲೆ ಈ ಸಮಸ್ಯೆ ಹೆಚ್ಚಿನ ಪರಿಣಾಮ ಬೀರಿಲ್ಲ.
ಮೊದಲೇ ನಷ್ಟದ ಹಾದಿಯಲ್ಲಿ ಸಾಗುತ್ತಿರುವ ಕೆಎಸ್‍ಆರ್‍ಟಿಸಿ ಈಗ ಚಾಲಕರಿಲ್ಲದೆ ಬಸ್ಸು ಸೇವೆ ಮೊಟಕುಗೊಳಿಸಬೇಕಾಗಿ ಬಂದಿರುವುದು ಕೆಎಸ್‍ಆರ್‍ಟಿಸಿಯನ್ನು ಇನ್ನಷ್ಟು ಆರ್ಥಿಕ ನಷ್ಟದತ್ತ ತಳ್ಳುವಂತೆ ಮಾಡಿದೆ.
ಅಂತರ್ ರಾಜ್ಯ ಸಾರಿಗೆಗೆ ಅಡ2ಚಣೆ:
ಕೆಎಸ್‍ಆರ್‍ಟಿಸಿಯ ಅಪ್ರಬುದ್ದ ಯೋಜನೆಗಳ ಫಲವಾಗಿ ಕಳೆದ ಕೆಲವು ವರ್ಷಗಳಿಂದ ಗಡಿ ಪ್ರದೇಶಗಳ ಅಂತರ್ ರಾಜ್ಯ ಬಸ್ ಸೇವೆಗಳಲ್ಲಿ ವ್ಯಾಪಕ ಅಡಚಣೆ ಕಮಡುಬಂದಿತ್ತು. ಇದೀಗ ಕಾರ್ಮಿಕರ ಕೊರತೆಯಿಂದ ಇನ್ನಷ್ಟು ಜಟಿಲತೆಗೆ ಕಾರಣವಾಗಿ ಹಲವು ಸೇವೆಗಳು ಮೊಟಕುಗೊಂಡಿದೆ. ಮುಖ್ಯವಾಗಿ ಜಿಲ್ಲೆಯ ಕಾಸರಗೋಡು-ಪುತ್ತೂರು, ಕಾಸರಗೋಡು-ಸುಳ್ಯ ಮತ್ತು ಕಾಸರಗೋಡು-ಮಂಗಳೂರು ರಸ್ತೆ ಸಂಪರ್ಕದಲ್ಲಿ ವ್ಯತ್ಯಗಳು ಕಂಡುಬಂದಿದೆ. ಈ ಪೈಕಿ ಕಾಸರಗೋಡು-ಪುತ್ತೂರು ಮತ್ತು ಕಾಸರಗೋಡು-ಮಂಗಳೂರು ರಸ್ತೆಯಲ್ಲಿ ಒಂದು ಬಸ್ ಸಂಚರಿಸಿದ ಬಳಿಕ ಒಂದೂವರೆ ಗಂಟೆಗಳಷ್ಟು ಹೊತ್ತು ಬಸ್ ಸೇವೆಗಳಿರದೆ ಪ್ರಯಾಣಿಕರು ಕಿಕ್ಕಿರಿದು ಬಸ್ ಕಾಯುವಿಕೆಯಲ್ಲಿ ಬಸವಳಿಯುತ್ತಿರುವುದು ಕಂಡುಬಂದಿದೆ. ಅಲ್ಲದೆ ಸಂಚರಿಸುವ ಬಸ್ ಗಳಲ್ಲಿ ಬಸ್ ನ ಬಾಗಿಲ ಮುಟ್ಟಲುಗಳಲ್ಲೂ ಜನರು ನೇತಾಡಿ ಬಹುದೂರ ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಕೇರಳ ರಸ್ತೆ ಸಾರಿಗೆ ಇಲಾಖೆ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ಜನಸಾಮಾನ್ಯರು ಆಕ್ರೋಶಿತರಾಗಿ ತೀವ್ರ ಪ್ರತಿಭಟನೆಗೆ ಧುಮುಕುವ ಸೂಚನೆ ನೀಡುತ್ತಿದ್ದಾರೆ.
ಅಭಿಮತ:
ಸರ್ಕಾರದ ಆದೇಶದಂತೆ ತಾತ್ಕಾಲಿಕ ಚಾಲಕರನ್ನು ಸೇವೆಯಿಂದ ಹೊರಗಿಡಲಾಗಿದ್ದು, ಬಸ್ ಚಾಲಕರ ಕೊರತೆ ತೀವ್ರವಿದೆ. ಈ ಕಾರಣದಿಂದ ಕೆಲವು ವ್ಯಾಪ್ತಿಗಳಲ್ಲಿ ಬಸ್ ಸಂಚಾರ ಮೊಟಕುಗೊಂಡು ತೊಂದರೆ ಉಂಟಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜೊತೆಗೆ ಅಗತ್ಯದ ಬಸ್ ಗಳ ಕೊರತೆಯೂ ಇದೆ. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವವರೆಗೆ ಸಂಚಾರ ಸಮಸ್ಯೆ ಬಗೆಹರಿಯದು. ಪ್ರಯಾಣಿಕರು ಸರ್ಕಾರದ ಗಮನ ಸೆಳೆಯಬಹುದಾಗಿದೆ.
-ಮನೋಜ್ ಕುಮಾರ್.
ಕೆಎಸ್‍ಆರ್‍ಟಿಸಿ ಕಾಸರಗೋಡು ಜಿಲ್ಲಾ ಸಾರಿಗೆ ಅಧಿಕಾರಿ(ಡಿಟಿಓ)