ರಾಷ್ಟ್ರದಲ್ಲೇ ಮೊತ್ತಮೊದಲ ಯತ್ನ ಇದು-ಸಮುದ್ರ ಕಿನಾರೆಯಲ್ಲಿ ಪರಿಸರ ಅಧ್ಯಯನಕ್ಕಾಗಿ 850 ಕೀ.ಮೀ ನಡಿಗೆ
ಕುಂಬಳೆ: ದಿನದಿಂದ ದಿನಕ್ಕೆ ಹದಗೆಡುತ್ತಿರುವ ಪರಿಸರ ಶೋಷಣೆ-ಮಾಲಿನ್ಯಗಳ ಸಮಸ್ಯೆಗಳಿಗೆ ಎಲ್ಲೆಡೆ ವಿವಿಧ ದೃಷ್ಟಿಯ ಜಾಗೃತಿಗಳು ನಡೆಯುತ್ತಿರುವುದರ ಮಧ್ಯೆ ಬೆಂಗಳೂರು ಮೂಲದ ಯುವತಿಯೋರ್ವೆ ಕೆಟುಕೆ ವಾಕ್(ಕೇರಳ ಟು ಕನ್ಯಾಕುಮಾರಿ) ಎಂಬ ವಿನೂತನ ಜಾಗೃತಿ ಯೋಜನೆಯ ಮೂಲಕ ಸದ್ದಿಲ್ಲದೆ ಪರಿಸರ ಸಮತೋಲನ ಕಾಯ್ದುಕೊಳ್ಳುವ ಯತ್ನದ ಭಾಗವಾದ ಸವಾಲೊಂದಕ್ಕೆ ಚಾಲನೆ ನೀಡಿದ್ದಾರೆ.
ಬೆಂಗಳೂರು ನಿವಾಸಿ ಜಾನೆಟ್ ಒಲೀನ್ ಎಂಬಾಕೆ ಪರಿಸರ ಮಾಲಿನ್ಯಗಳ ಮೂಲ ಹಾಗೂ ಪರಿಣಾಮಗಳನ್ನು ಅರ್ಥೈಸುವ ನಿಟ್ಟಿನಲ್ಲಿ ಅ.5 ರಂದು ಮಂಗಳೂರು ಸಮೀಪದ ತೊಕ್ಕೋಟು ಬಳಿಯ ಉಳ್ಳಾಲ ಕಡಲ ತಡಿಯಿಂದ ಕಾಲ್ನಡಿಗೆಯಲ್ಲಿ ಸಮುದ್ರ ತಟದ ಮೂಲಕ ಕನ್ಯಾಕುಮಾರಿಗೆ ವಿಶೇಷ ಅಧ್ಯಯನ ನಡಿಗೆಗೆ ಚಾಲನೆ ನೀಡಿದ್ದು, ಬುಧವಾರ ಕಾಸರಗೋಡಿಗೆ ಆಗಮಿಸಿದರು. ಅವರ ಜೊತೆಗೆ ಮೇಘನಾ ಹಾಗೂ ಪ್ರದೀಪ್ ಸಹಾಯಕರಾಗಿ ತಮಡದಲ್ಲಿದ್ದಾರೆ. ಸುಮಾರು 850 ಕಿಲೋಮೀಟರ್ ದೂರವನ್ನು ಸಮುದ್ರ ಕಿನಾರೆಯ ಮೂಲಕ 60 ದಿನಗಳಲ್ಲಿ ತಲಪುವ ಯೋಜನೆ ಇರಿಸಲಾಗಿದೆ ಎಂದು ಜಾನೆಟ್ ಗುರುವಾರ ಸಮರಸ ಸುದ್ದಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿರುವರು.
ಏನಿದು ಲಕ್ಷ್ಯ:
ಸಾಮಾನ್ಯವಾಗಿ ಪರಿಸರ ಮಾಲಿನ್ಯ, ಹವಾಮಾನ ವೈಪರೀತ್ಯಗಳು ನಗರ ಪ್ರದೇಶಗಳಲ್ಲೇ ಅತಿ ಹೆಚ್ಚಿರುವುದಾಗಿ ನಾವು ಗುರುತಿಸುತ್ತೇವೆ. ಆದರೆ ಅದಕ್ಕಿಂತಲೂ ಭಿನ್ನವಾಗಿ ಕಳೆದ ಒಂದು ದಶಕಗಳಲ್ಲಿ ಹಳ್ಳಿ ಪ್ರದೇಶ ಹಾಗೂ ಕಡಲ ತೀರಗಳು ಪರಿಸರ ಅಸಮತೋಲನದಿಂದ ವ್ಯಾಪಕ ಹಾನಿಗೊಳಗಾಗುತ್ತಿವೆ. ಅದರಲ್ಲೂ ಕಡಲ ತೀರ ಪ್ರದೇಶಗಳು ಭಯಾನಕವಾಗಿ ಪ್ಲಾಸ್ಟಿಕ್ ಸಹಿತ ಪರಿಸರ ಹಾನಿಕಾರಕ ವಸ್ತುಗಳ ಸಂತೆಗಳಾಗಿ ಬದಲಾಗುತ್ತಿದ್ದು, ಇದು ಕಡಲ ತೀರ ನಿವಾಸಿಗಳ ಅತಂತ್ರತೆಗೂ ಕಾರಣವಾಗುತ್ತಿದೆ. ನಗರ ವಾಸಿಗಳಿಂದ ಉಂಟಾಗುವ ಇಂತಹ ಹಾನಿಗಳ ಬಗ್ಗೆ ಕರಾವಳಿ ವಾಸಿಗಳಿಗೆ ಯಾವ ಅರಿವೂ ಇದ್ದಂತಿಲ್ಲ. ಜೊತೆಗೆ ಕರಾವಳಿ ವಾಸಿಗಳು ಇದಕ್ಕೆ ಕಾರಣವೂ ಅಲ್ಲ.
ಆದರೆ ನಗರ ವಾಸಿಗಳು ತಮ್ಮ ವಿರಾಮವನ್ನು, ಶುದ್ದ ವಾಯು ಸೇವನೆಯ ಹೆಸರಲ್ಲಿ ಕಡಲ ತಡಿಯ ವಾತಾವರಣ ಅನುಭವಿಸಲು ಪ್ರವಾಸಿಗರಾಗಿ ಆಗಮಿಸುತ್ತಿದ್ದು, ಮರಳುವಾಗ ಸಾಕಷ್ಟು ಮಾಲಿನ್ಯಗಳನ್ನು ಎಸೆದು ತಮ್ಮ ಪರಿಸರ ಕಾಳಜಿಗೆ ಪ್ರತಿಕೂಲರಾಗಿ ವರ್ತಿಸಿ ಹಿಂತಿರುಗುತ್ತಾರೆ. ಅಲ್ಲದೆ ನಗರ ಪ್ರದೇಶಗಳ ಮಾಲಿನ್ಯ ವಿಲೇವಾರಿ ಪ್ರದೇಶಗಳಾಗಿಯೂ ಕಡಲ ತಟಿಗಳು ಈಗೀಗ ಸದ್ದಿಲ್ಲದೆ ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸ್ಪಷ್ಟವಾದ ಚಿತ್ರಣಗಳು ಹೊರಜಗತ್ತಿಗೆ ಕೊರತೆಯಿದ್ದು, ಇದರ ನಿಖರ ದಾಖಲೀಕರಣಕ್ಕಾಗಿ ಈ ವಿಶಿಷ್ಟ ನಡಿಗೆಯನ್ನು ಆರಂಭಿಸಿರುವುದಾಗಿ ಜಾನೆಟ್ ಹಾಗೂ ಮೇಘನಾ ತಿಳಿಸುತ್ತಾರೆ.
ಅಧ್ಯಯನ ನಡಿಗೆಯಲ್ಲಿ ಏನಿದೆ!?
ಎರಡು ಮುಖ್ಯ ಅಂಶಗಳ ಬಗ್ಗೆ ಜಾನೆಟ್ ಅವರು ತಮ್ಮ ಅಧ್ಯಯನ ನಡಿಗೆಯಲ್ಲಿ ದಾಖಲೀಕರಣ ನಡೆಸಲಿದ್ದಾರೆ. ಕಡಲ ಕಿನಾರೆಗಳಲ್ಲಿ ಪ್ರಸ್ತುತ ಪರಿಸರ ವಿರೋಧಿ ಚಟುವಟಿಕೆಗಳು ಏನೇನಾಗುತ್ತಿದೆ, ಯಾಕಾಗುತ್ತಿದೆ ಮತ್ತು ಪರಿಣಾಮ ಹಾಗೂ ಕಾರಣಕರ್ತರ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮತ್ತು ವಿಡಿಯೋ ದಾಖಲೀಕರಣ ಒಂದಾದರೆ ಕೇರಳ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶುಚಿತ್ವ ಮಿಷನ್ ಯೋಜನೆಯ ಜಾಗೃತಿ ಮತ್ತು ಯೋಜನೆಯ ಅನುಷ್ಠಾನದ ಸ್ಥೂಲ ಪರಿಣಾಮಗಳ ಬಗ್ಗೆ ಈ ಅಧ್ಯಯನ ನಡಿಗೆ ಜಗತ್ತಿನ ಮುಂದೆ ಸತ್ಯ ತೆರೆದಿಡಲು ಉದ್ದೇಶಿಸಲಾಗಿದೆ.
ಪರಿಚಯ:
ಜಾನೆಟ್ ತಮಿಳು ಮೂಲದ ಬೆಂಗಳೂರು ನಿವಾಸಿಯಾಗಿದ್ದು, ಶಿಕ್ಷಣ ಕ್ಷೇತ್ರದ ಅಧ್ಯಯನ ನಡೆಸಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಜೊತೆಗಾರರಾಗಿರುವ ಮೇಘನಾ ಬೆಂಗಳೂರು ಅವರು ಸಿನಿ ಅಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಜಾನೆಟ್ ಅವರ ಕಡಲ ತಟಿಯ ಪ್ರಯಾಣದಲ್ಲಿ ಜೊತೆಯಾಗಿ ವೀಡಿಯೋ ದಾಖಲೀಕರಣ ನಡೆಸುತ್ತಿದ್ದಾರೆ. ಇವರಿಬ್ಬರೊಂದಿಗೆ ಬೆಂಗಳೂರಿನ ಯುವ ಪತ್ರಕರ್ತ ಪ್ರದೀಪ್ ಜೊತೆಗಿದ್ದು, ಜಾನೆಟ್ ಸಂಚರಿಸುವ ಕಡಲ ತಟಿಗೆ ಸಮಾನಾಂತರವಾದ ರಸ್ತೆಯಲ್ಲಿ ತಮ್ಮ ಕಾರಿನ ಮೂಲಕ ಸಂಚರಿಸಿ ನೆರವಾಗುತ್ತಿದ್ದು, ದೈನಂದಿನ ಪ್ರಯಾಣ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸುವ ಹೊಣೆ ನಿರ್ವಹಿಸುತ್ತಿದ್ದಾರೆ.
ದಿನವೊಂದರಲ್ಲಿ ಜಾನೆಟ್ ಅವರು 8 ರಿಂದ 12 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಾರೆ. ಕೆಲವೆಡೆ ಸಮುದ್ರ ಕಿನಾರೆ ನದಿ ಸಂಗಮ ಮತ್ತು ಹಿನ್ನೀರ ಕಾರಣ ಮುಚ್ಚಲ್ಪಡುವ ಸ್ಥಳಗಳಲ್ಲಿ ದೋಣಿಯ ಮೂಲಕ ಮತ್ತು ಬಳಸು ದಾರಿಯ ಮೂಲಕ ಸಂಚರಿಸಬೇಕಾಗುತ್ತಿದೆ. ರಾತ್ರಿ ಸಮುದ್ರ ತೀರದ ಗುರುತಿಸಲಾದ ಮನೆಗಳಲ್ಲಿ ವಿಶ್ರಾಂತಿ ಪಡೆಯುವ ತಂಡ ಅಸೌಕರ್ಯವಾದಲ್ಲಿ ಸ್ಥಳೀಯ ಪೋಲೀಸ್ ಠಾಣೆಯ ಸಹಾಯ ಪಡೆದು ವಾಸ್ತವ್ಯದ ವ್ಯವಸ್ಥೆ ರೂಪಿಸುತ್ತಿದೆ.
ತಂಡಕ್ಕೆ ಮಾರ್ಗದರ್ಶಕರು ಇವರು:
ಜಾನೆಟ್ ಮತ್ತವರ ತಂಡಕ್ಕೆ ಮಾರ್ಗದರ್ಶಕರಾಗಿ ಕಾಲ್ನಡಿಗೆ ಅಧ್ಯಯನ ಯಾತ್ರೆಗೆ ನೆರವಾದವರು ಮಂಗಳೂರಿನ ಖ್ಯಾತ ಸಮಾಜ ಸೇವಕ, ರೋಶನಿ ನಿಲಯ ಕಾಲೇಜಿನ ಆಡಳಿತ ಸಮಿತಿ ಸದಸ್ಯ, ಉಳ್ಳಾಲ ಪುರಸಭೆಯಲ್ಲಿ ಪರಿಸರ ಜಾಗೃತಿಯ ಕಾಳಜಿಯಲ್ಲಿ ಪೂರ್ಣ ತೊಡಗಿಸಿಕೊಂಡಿರುವ ಕಿಶೋರ್ ಅತ್ತಾವರ ಅವರು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಹಿರಿಯ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಕುಂಬಳೆ ಅನಂತಪುರ ನಿವಾಸಿ ಕೃಷ್ಣ ಆಳ್ವ ಅವರು ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ನಿರ್ದೇಶಕರಾಗಿ ಯಾತ್ರೆಗೆ ನೆರವಾದರು.
ತಂಡ ಶುಕ್ರವಾರ ಬೇಕಲ ಕೋಟೆ ಪ್ರದೇಶ ತಲಪಿದ್ದು, ಭಾನುವಾರ ಕಣ್ಣೂರು ಜಿಲ್ಲೆ ಪ್ರವೇಶಿಸಲಿದೆ.
ಅಭಿಮತ:
ಪರಿಸರ ಮಲಿನೀಕರಣ ಭೀಕರ ಸಮಸ್ಯೆಯಾಗಿ ಮಾನವ ಸಹಿತ ಜೀವಕೋಟಿಗಳ ಬದುಕಿಗೆ ಸವಾಲಾಗುತ್ತಿದೆ. ಜೊತೆಗೆ ನಗರೀಕರಣದ ಭೀಕರತೆಯಿಂದ ನಗರಗಳಿಗಿಂತ ಹೆಚ್ಚು ಹಳ್ಳಿ ಹಾಗೂ ಕಡಲ ತೀರ ಪ್ರದೇಶ ನಲುಗುತ್ತಿದ್ದು, ಮುಗ್ದ ಜನರು, ಜೀವಿಗಳು ಸಂತ್ರಸ್ಥಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ನಡೆಯುತ್ತಿದ್ದು, ಆದರೆ ನಿಖರ ಅಂಕಿಅಂಶಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ನೈಜ ಸತ್ಯಾಂಸಗಳ ದಾಖಲೀಕರಣಕ್ಕಾಗಿ ಇಂತಹ ಯೋಜನೆ ತನ್ನ ಬಹುದಿನಗಳ ಲಕ್ಷ್ಯವಾಗಿದ್ದು, ಉಳ್ಳಾಲ ಕಡಲ ತೀರದಿಂದ ಕನ್ಯಾಕುಮಾರಿಗೆ ಈ ಅಧ್ಯಯನ ಪ್ರವಾಸ ಕೈಗೊಂಡಿರುವೆ. ಜೊತೆಗೆ ಸ್ನೇಹಿತರು ನೆರವಾಗುತ್ತಿದ್ದಾರೆ. ತನ್ನ ಅಧ್ಯಯನದ ದೈನಂದಿನ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಜನರ ಗಮನ ಸಳೆಯಲಾಗುತ್ತಿದೆ.
ಇಷ್ಟು ದಿನಗಳ ಪುಟ್ಟ ಪ್ರಯಾಣದಲ್ಲಿ ತಾನು ಗಮನಿಸಿದಂತೆ ಕಡಲ ತೀರಗಳು ಬೀಭತ್ಸವಾಗಿ ಹಾನಿಗೊಳಗಾಗುತ್ತಿದೆ. ಪ್ರಾದೇಶಿಕವಾಗಿ ವಿವಿಧ ನಮೂನೆಯಲ್ಲಿ ಕಡಲ ತೀರಗಳನ್ನು ಮಾಲಿನ್ಯ-ಕಸಕಡ್ಡಿಗಳ ಸಂಗ್ರಾಹಕ ನೆಲವಾಗಿ ಪರಿಗಣಿಸಿದಂತೆ ತೋರುತ್ತಿದೆ. ಪ್ಲಾಸ್ಟಿಕ್ ಉತ್ಪನ್ನಗಳ ವಿವಿಧ ರಾಶಿಗಳು ನನ್ನನ್ನು ದಿಗಿಲುಗೊಳಿಸಿದೆ.
ನಮ್ಮ ಈ ಕಾಲ್ನಡಿಗೆ ಅಧ್ಯಯನ ಪ್ರವಾಸಕ್ಕೆ ಜಾಲತಾಣಗಳ ಮೂಲಕ ಮಾಹಿತಿ ನೀಡಿದ ಪರಿಣಾಮ ಖರ್ಚು ವೆಚ್ಚಗಳ ನಿಭಾವಣೆಗೆ ಅಗತ್ಯದ ನೆರವುಗಳು ಬಂದಿವೆ. ಈ ನಿಟ್ಟಿನಲ್ಲಿ ಸಹೃದಯ ಪರಿಸರ ಕಾಳಜಿಯ ಮಂದಿಗೆ ಋಣಿ.
-ಜಾನೆಟ್ ಒಲೀನ್
ಸಮುದ್ರ ತಟಿಯಲ್ಲಿ ಕಾಲ್ನಡಿಗೆಯ ಮೂಲಕ ಸಂಚರಿಸುತ್ತಿರುವ ಬೆಂಗಳೂರು ನಿವಾಸಿ ಯುವತಿ.