ಕಾಸರಗೋಡು: ಬಳಕೆಯಿಲ್ಲದ ಪ್ಲಾಸ್ಟಿಕ್ ಪೆನ್‍ಗಳನ್ನು ಸಂಗ್ರಹಿಸಿ ಪುನರ್ ನಿರ್ಮಾಣಕ್ಕೆ ನೀಡುವ ಉದ್ದೇಶದೊಂದಿಗೆ ಹರಿತ ಕೇರಳಂ ಮಿಷನ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿರುವ ಪೆನ್ ಫ್ರೆಂಡ್ ಯೋಜನೆ ಕಾಸರಗೋಡು ಸರಕಾರಿ ಐ.ಟಿ.ಐ.ಯಲ್ಲಿ ಆರಂಭಗೊಂಡಿದೆ.
ಸಂಸ್ಥೆಯ ಎನ್.ಎಸ್.ಎಸ್. ಯೂನಿಟ್, ಹರಿತ ಕ್ಯಾಂಪಸ್ ಯೂನಿಟ್ ಜಂಟಿಯಾಗಿ ಜಿಲ್ಲಾ ಹರಿತ ಕೇರಳಂ ಮಿಷನ್‍ನ ಸಹಭಾಗಿತ್ವದೊಂದಿಗೆ ಈ ಯೋಜನೆ ಜಾರಿಗೊಳಿಸುತ್ತಿದೆ. ಹೆಚ್ಚುವರಿ ದಂಡನಾ„ಕಾರಿ ಕೆ.ಅಜೇಷ್ ಯೋಜನೆ ಉದ್ಘಾಟಿಸಿದರು. ಪ್ರಾಂಶುಪಾಲ ಸಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಯೋಜನೆಯ ಮಾಹಿತಿ ನೀಡಿದರು. ಎ.ಪಿ.ಸೆಲೀನಾ, ಸಿ.ಶಶಿಕುಮಾರ್, ಮನೋಜ್ ಕುಮಾರ್, ನಸೀಫ್, ಇರ್ಫಾನ್ ಮೊದಲಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಯೋಜನಾ„ಕಾರಿ ಕೆ.ಸಜೀಷ್ ಸ್ವಾಗತಿಸಿದರು. ಪಿ.ಪ್ರಜಿತ್ ವಂದಿಸಿದರು.


