ಕಾಸರಗೋಡು: ಕೇರಳದ ಕೂಡತ್ತಾಯಿಯಲ್ಲಿ ನಡೆದ ಸಾಮೂಹಿಕ ಹತ್ಯೆಗೆ ಸಂಬಂ„ಸಿ ಜೋಲಿ ಎಂಬಾಕೆ ಬಂ„ತೆಯಾಗಿರುವ ಹಿನ್ನೆಲೆಯಲ್ಲಿ ಇಡೀ ಮಹಿಳಾ ಸಮುದಾಯವನ್ನೇ ದೋಷಿಗಳಂತೆ ಕಾಣುವುದು ಸರಿಯಲ್ಲ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟ್ರೋಲ್‍ಗಳು ಮಹಿಳೆಯರಿಗೆ ನೋವುಂಟುಮಾಡುವ ರೀತಿಯಲ್ಲಿರುವುದು ಇದಕ್ಕೆ ನಿದರ್ಶನ ಎಂದು ರಾಜ್ಯ ಮಹಿಳಾ ಆಯೋಗ ಅಭಿಪ್ರಾಯಪಟ್ಟಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜ್ಯ ಮಹಿಳಾ ಆಯೋಗದ ಅದಾಲತ್‍ನ ನಂತರ ಸದಸ್ಯೆಯರಾದ ಡಾ.ಷಾಹಿದಾ ಕಮಾಲ್ ಮತ್ತು ಇ.ಎಂ.ರಾಧಾ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಚಾರ ಪ್ರಕಟಿಸಿದರು.
ತಪ್ಪು ಯಾರೇ ಮಾಡಿದರೂ ಅವರು ಶಿಕ್ಷಾರ್ಹರು. ಕೊಲೆ ಪ್ರಕರಣದಲ್ಲಿ ಆರೋಪಿಗಳು ಪುರುಷರಾಗಿದ್ದರೆ ಒಟ್ಟಂದದಲ್ಲಿ ಗಂಡಸರನ್ನು ದೂಷಿಸುವ ಕ್ರಮವಿಲ್ಲ. ಆದರೆ ಮಹಿಳೆ ಆರೋಪಿಯಾಗಿದ್ದಲ್ಲಿ ಟೀಕಿಸುವುದಕ್ಕೆ ಕೆಲವು ಸಾಮಾಜಿಕ ಜಾಲತಾಣಗಳು ನಾ ಮುಂದು, ತಾ ಮುಂದು ಎನ್ನುವಂತೆ ಮುಗಿಬೀಳುತ್ತವೆ. ತಮ್ಮ ತಾಯಿ, ತಂಗಿಯಂದಿರೂ ಮಹಿಳೆಯರೇ ಎಂಬುದು ಅವರಿಗೆ ನೆನಪಿಗೆ ಬರುವುದಿಲ್ಲ ಎಂದವರು ಆರೋಪಿಸಿದರು.
ಇಂಥಾ ಸಾಮಾಜಿಕ ಮಾಧ್ಯಮಗಳ ವಿರುದ್ಧ ಕಠಿಣಕ್ರಮಕೈಗೊಳ್ಳುವಂತೆ ಜಿಲ್ಲಾ ಪೆÇಲೀಸ್ ವರಿಷ್ಠ ಅಧಿಕಾರಿಗಳನ್ನು ಅವರು ಆಗ್ರಹಿಸಿದರು. ಅದಾಲತ್‍ನಲ್ಲಿ ಒಟ್ಟು 37 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. 5 ಕೇಸುಗಳಿಗೆ ತೀರ್ಪು ನೀಡಲಾಗಿದೆ. ಮೂರು ದೂರುಗಳಲ್ಲಿ ಆಯಾ ಇಲಾಖೆಗಳು ವರದಿ ನೀಡುವಂತೆ ತಿಳಿಸಲಾಗಿದೆ. ನೂತನವಾಗಿ ಲಭಿಸಿದ 2 ದೂರುಗಳ ಸಹಿತ 24 ಪ್ರಕರಣಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.
ಪರಿಶೀಲಿಸಿದ ಕೇಸುಗಳ ಬಗ್ಗೆ ಮಾತನಾಡಿದ ಅವರು ಮಾನಸಿಕ ವಿಕಲ ಚೇತನತೆ ಇರುವ ಉಪ್ಪಳದಲ್ಲಿ ನೆಲೆಸಿರುವ ಮೂಲತ: ಜಾಖರ್ಂಡ್ ನಿವಾಸಿ ಮಹಿಳೆಯನ್ನು ತಾನು ಡಾಕ್ಟರ್ ಎಂದು ತಪ್ಪು ಮಾಹಿತಿ ನೀಡಿ ವ್ಯಕ್ತಿಯೊಬ್ಬ ಮದುವೆಯಾಗಿದ್ದ. ಆದರೆ ಪತಿ ನಿಧನರಾದ ಹಿನ್ನೆಲೆಯಲ್ಲಿ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದ್ದು, ಪತಿಯ ಮನೆಮಂದಿ ತಮ್ಮನ್ನು ತಿರಸ್ಕರಿಸಿರುವುದಾಗಿ ಪತ್ನಿ ದೂರು ನೀಡಿದ ಪ್ರಕರಣದಲ್ಲಿ ಮುಂದಿನ ಅದಾಲತ್‍ನಲ್ಲಿ ಪತಿಯ ಹೆತ್ತವರು ಮತ್ತು ಸಂಬಂ„ಕರು ಹಾಜರಾಗುವಂತೆ ಆಯೋಗ ಆದೇಶ ನೀಡಿದೆ.
ಅವಿವಾಹಿತೆ ಯುವತಿಯ ವಿರುದ್ಧ ನಕಲಿ ಫೇಸ್‍ಬುಕ್ ಐಡಿ ನಿರ್ಮಿಸಿ ಅಪಮಾನಗೊಳಿಸಿದ ಪ್ರಕರಣಕ್ಕೆ ಸಂಬಂ„ಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೈಬರ್ ಸೆಲ್‍ಗೆ ಆದೇಶ ನೀಡಲಾಗಿದೆ. ಸರಕಾರಿ ಸಿಬ್ಬಂದಿಯಾಗಿರುವ ಪತಿ ವಿಚ್ಛೇದಿತ ಪತ್ನಿಗೆ ಮಾಸಿಕ ವೆಚ್ಚ ನೀಡುತ್ತಿಲ್ಲ ಎಂಬ ದೂರಿನಲ್ಲಿ ತಿಂಗಳಿಗೆ 3 ಸಾವಿರ ರೂ. ನೀಡುವಂತೆ ಆದೇಶಿಸಿದ ಆಯೋಗ ಒಂದು ಕಂತನ್ನು ಅದಾಲತ್‍ನಲ್ಲೇ ಆಯೋಗ ಹಸ್ತಾಂತರಿಸಿದೆ.
ಪುತ್ರನೊಬ್ಬ ಕುಡಿತದ ಮತ್ತಿನಲ್ಲಿ ಹಲ್ಲೆ ನಡೆಸುವುದಾಗಿ 65 ವರ್ಷದ ಮಹಿಳೆ ನೀಡಿದ ದೂರಿನಲ್ಲಿ ಆರೋಪಿಗೆ ಎಚ್ಚರಿಕೆ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಮುನ್ನೆಚ್ಚರಿಕೆ ನೀಡಿ ಕಳುಹಿಸಲಾಗಿದೆ. ಮಹಿಳಾ ಆಯೋಗ ಪ್ಯಾನೆಲ್ ನ್ಯಾಯವಾದಿ ಎ.ಪಿ.ಉಷಾ, ಮಹಿಳಾ ಸೆಲ್ ಎಸ್.ಐ.ಶಾಂತಾ ಮೊದಲಾದವರು ಅದಾಲತ್‍ಗೆ ನೇತೃತ್ವ ವಹಿಸಿದ್ದರು.

