ಬದಿಯಡ್ಕ: ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಹಿನ್ನೆಲೆಯಲ್ಲಿ ನೀರ್ಚಾಲು ಮಾನ್ಯ ರಸ್ತೆ ಬದಿಯ ಕಾಡನ್ನು ನೀರ್ಚಾಲು ಪರಿಸರ ನಿವಾಸಿಗಳು ಹಾಗೂ ವ್ಯಾಪಾರಿಗಳು ಸ್ವಚ್ಛಭಾರತ್ ಸಂಕಲ್ಪದೊಂದಿಗೆ ಮಂಗಳವಾರ ತೆರವುಗೊಳಿಸಿದರು. ಶಂಕರ ನಾರಾಯಣ ಭಟ್, ಅರವಿಂದ, ಕೇಶವ ಮಯ್ಯ, ಲಕ್ಷ್ಮಿ, ರತ್ನಾವತಿ, ತುಳಸಿ, ವಸಂತಿ ಮೊದಲಾದವರು ಭಾಗವಹಿಸಿದ್ದರು. ಪೇಟೆ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು, ವ್ಯಾಪಾರಿಗಳಲ್ಲಿ ಸ್ವಚ್ಚ ಭಾರತ ಸಂಕಲ್ಪ ಈ ಮೂಲಕ ಸಾಕ್ಷಾತ್ಕಾರಗೊಳ್ಳುತ್ತಿರುವುದು ಭರವಸೆಗೆ ಕಾರಣವಾಗಿದೆ.
ರಸ್ತೆ ಬದಿಯ ಕಾಡು ತೆರವು ಕಾರ್ಯ
0
ಅಕ್ಟೋಬರ್ 03, 2019