ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕಣ್ಣೂರು ವಿಶ್ವವಿದ್ಯಾಲಯ ಮೈದಾನದಲ್ಲಿ ಇತ್ತೀಚೆಗೆ ನಡೆದ ಕೇರಳ ರಾಜ್ಯ ಮಟ್ಟದ ಕ್ರೀಡಾಕೂಟದ 30 ವರ್ಷಕ್ಕಿಂತ ಕೆಳಗಿನ ಶಿಕ್ಷಕಿಯರ 200ಮೀ. ಓಟದಲ್ಲಿ ಪಣಿಯೆ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸವಿತಾ ಕೆ. ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಹಿಂದೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.