ಕಾಸರಗೋಡು: ರಾಜ್ಯ ಮಟ್ಟದ ಶಾಲಾ ಕಲೋತ್ಸವ ಅಂಗವಾಗಿ ನ.28ರಿಂದ ಕಾಞಂಗಾಡ್‍ನ ಅಲಾಮಿಪಳ್ಳಿ ನೂತನ ಬಸ್ ನಿಲ್ದಾಣ ಆವರಣದಲ್ಲಿ ಮೂರು ದಿನಗಳ ಸಾಂಸ್ಕøತಿಕ ಸಂಜೆ ಕಾರ್ಯಕ್ರಮಗಳು ವೈಭವಯುತವಾಗಿ ನಡೆಯಲಿವೆ.
ಜಿಲ್ಲೆಯ ಪರಂಪರೆ, ಸಂಸ್ಕಾರವನ್ನು ತೆರೆದಿಡುವ ಸಾಂಸ್ಕøತಿಕ ಕಾರ್ಯಕ್ರಮಗಳು ಈ ವೇಳೆ ಪ್ರದರ್ಶನಗೊಳ್ಳಲಿವೆ. ಇದರ ಅಂಗವಾಗಿ ತಚ್ಚಂಗಾಡ್ ಸರಕಾರಿ ಶಾಲೆಯ 300 ಮಕ್ಕಳು ಪ್ರಸ್ತುತ ಪಡಿಸುವ ಬೃಹತ್ ಒಪ್ಪನದಿಂದ ತೊಡಗಿ ಒಡಿಸ್ಸಿ, ಪಂಜಾಬಿ ನೃತ್ಯದ ವರೆಗಿನ ರಾಷ್ಟ್ರೀಯ ಮಟ್ಟದ ಕಲಾಪ್ರಕಾರಗಳ ಪ್ರಸ್ತುತಿಯೂ ನಡೆಯಲಿವೆ. ಕೋಲಾಟ, ಗಝಲ್, ಕಾವ್ಯವಾಚನ, ತೌಳವ ಜಾನಪದ ಕಲಾ ಪ್ರಕಾರ ಇತ್ಯಾದಿಗಳೂ ವೇದಿಕೆಯೇರಲಿವೆ.
ನ.28ರಂದು ಸಂಜೆ 5 ಗಂಟೆಗೆ ಅಲಾಮಿಪಳ್ಳಿ ಬಸ್ ನಿಲ್ದಾಣ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಸಂಗೀತ ನಿರ್ದೇಶಕ ಕೈದಪ್ರಂ ದಾಮೋದರನ್ ನಂಬೂದಿರಿ ಸಾಂಸ್ಕøತಿಕ ಸಂಜೆಯನ್ನು ಉದ್ಘಾಟಿಸುವರು. ಶಿಕ್ಷಣ ಸಚಿವ ಸಿ.ರವೀಂದ್ರನಾಥ್, ಕಂದಾಯ ಸಚಿವ ಇ.ಚಂದ್ರಶೇಖರನ್ ಮುಖ್ಯ ಅತಿಥಿಯಾಗಿರುವರು. ತದನಂತರ ಬೃಹತ್ ಒಪ್ಪನ, ರಾತ್ರಿ 7.30ಕ್ಕೆ ಮೆಗಾ ಡ್ಯಾನ್ಸ್ ಕಾರ್ಯಕ್ರಮ ಜರುಗಲಿದೆ.
ನ.29ರಂದು ಸಂಜೆ 4.30ಕ್ಕೆ ನಡೆಯುವ ಸಮಾರಂಭವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ನಂತರ ಕೋಲಾಟ, ಕಾವ್ಯವಾಚನ, ಗಝಲ್ ನಡೆಯಲಿದೆ. ನ.30ರಂದು ಸರಣಿಯ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಸಿನಿಮಾ ವಿಶೇಷ ಕಾರ್ಯಕ್ರಮ, ಮಂಗಳಂಕಳಿ, ಅಲಾಮಿ ಹಾಡುಗಳು, ಕರಗಾಟ್ಟಂ ಇತ್ಯಾದಿ ಜರುಗಲಿವೆ. ಈ ಕಾರ್ಯಕ್ರಮಕ್ಕಾಗಿ ಸಾಂಸ್ಕøತಿಕ ಸಮಿತಿ ಭರದಿಂದ ಸಿದ್ಧತೆ ನಡೆಸುತ್ತಿದೆ.

