ಕಾಸರಗೋಡು: ರಾಜ್ಯ ಮಟ್ಟದ ಕಲೋತ್ಸವದಲ್ಲಿ ಭಾಗಿಗಳಾಗಲು ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೆÇೀಷಕರು ವಸತಿ ಸಂಬಂಧ ಗಾಬರಿ ಪಡಬೇಕಿಲ್ಲ. ಆಯಾ ಸ್ಪರ್ಧಾಳುಗಳ ವೇದಿಕೆಗಳ ಬಳಿಯೇ ಅವರ ತಂಗುದಾಣಗಳನ್ನೂ ನಿಗದಿಪಡಿಸಲಾಗಿದೆ.
ಹನ್ನೊಂದು ಸಾವಿರಕ್ಕೂ ಅ„ಕ ಮಂದಿ ಈ ಬಾರಿಯ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ À್ಪರ್ಧಾಳುಗಳಾಗಲಿದ್ದು, ಇವರಿಗೆ ಬೇಕಾದ ವಸತಿ ವ್ಯವಸ್ಥೆಗಳನ್ನು ಸುಸಜ್ಜಿತ ಮತ್ತು ಸುರಕ್ಷಿತವಾಗಿ ಏರ್ಪಡಿಸಲಾಗಿದೆ. ಇವರಲ್ಲಿ ಹುಡುಗರಿಗಾಗಿ 6 ಶಾಲೆಗಳಲ್ಲಿ, ಹುಡುಗಿಯರಿಗಾಗಿ 5 ಶಾಲೆಗಳಲ್ಲಿ ವಸತಿ ಸೌಕರ್ಯ ಒದಗಿಸಲಾಗಿದೆ. ಅನಿವಾರ್ಯ ಹಂತಗಳಲ್ಲಿ ಬಳಕೆಗಾಗಿ ಮತ್ತೆರಡು ಶಾಲೆಗಳನ್ನು ಹೆಚ್ಚುವರಿಯಾಗಿ ಇರಿಸಲಾಗಿದೆ.
ವಯನಾಡ್ ಜಿಲ್ಲೆಯಿಂದ ಆಗಮಿಸುವ ವಿದ್ಯಾರ್ಥನಿಯರಿಗಾಗಿ ಹೊಸದುರ್ಗ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಇಡುಕ್ಕಿ, ಕೊಲ್ಲಂ, ಎರ್ನಾಕುಲಂ ಜಿಲ್ಲೆಗಳ ವಿದ್ಯಾರ್ಥಿನಿಯರಿಗಾಗಿ ಕಾಂಞಂಗಾಡ್ ಲಿಟಲ್ ಫ್ಲವರ್ ಹೆಣ್ಣುಮಕ್ಕಳ ಹೈಯರ್ ಸೆಕೆಂಡರಿ ಶಾಲೆ, ಪತ್ತನಂತಿಟ್ಟ, ಮಲಪ್ಪುರಂ, ಆಲಪ್ಪುಳ, ತಿರುವನಂತಪುರಂನ ವಿದ್ಯಾರ್ಥಿನಿಯರಿಗಾಗಿ ಪಡನ್ನಕ್ಕಾಡ್ ಅನುದಾನಿತ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ, ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ವಿದ್ಯಾರ್ಥಿನಿಯರಿಗಾಗಿ ಅತಿಯಾಂಬೂರು ಚಿನ್ಮಯಾ ವಿದ್ಯಾಲಯ, ಕೋಯಿಕೋಡ್, ಪಾಲಕ್ಕಾಡ್, ತ್ರಿಶೂರು, ಕೋಟ್ಟಯಂ ಜಿಲ್ಲೆಯ ವಿದ್ಯಾರ್ಥಿನಿಯರಿಗಾಗಿ ಬೆಲ್ಲ ಕ್ರೈಸ್ಟ್ ಸಿ.ಎಂ.ಐ.ಪಬ್ಲಿಕ್ ಶಾಲೆಯಲ್ಲಿ ವ್ಯವಸ್ಥೆ ಏರ್ಪಡಿಸಲಾಗಿದೆ.
ಪತ್ತನಂತಿಟ್ಟ, ಆಲಪ್ಪುಳ, ತಿರುವನಂತಪುರಂ ಜಿಲ್ಲೆಗಳಿಂದ ಆಗಮಿಸುವ ಹುಡುಗರಾದ ಸ್ಪರ್ಧಾಳುಗಳಿಗೆ ಪಡನ್ನಕ್ಕಾಡ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಇಡುಕ್ಕಿ, ವಯನಾಡ್, ಪಾಲಕ್ಕಾಡ್ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪಡನ್ನಕ್ಕಾಡ್ ಸ್ಟೆಲ್ಲ ಮೇರೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕಾಸರಗೋಡು, ಎರ್ನಾಕುಲಂ, ಕೊಲ್ಲಂ, ಕೋಯಿಕೋಡ್ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಚೆಮ್ಮಟ್ಟುಂವಯಲ್ ಬೆಲ್ಲ ಈಸ್ಟ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕೋಟ್ಟಯಂ, ಕಣ್ಣೂರು ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಕೋಟ್ಟಚ್ಚೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಲಪ್ಪುರಂ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಕೆ.ಐ.ಎ. ಕಿರಿಯ ಪ್ರಾಥಮಿಕ ಶಾಲೆ, ತ್ರಿಶೂರಿನ ವಿದ್ಯಾರ್ಥಿಗಳಿಗಾಗಿ ಮುಚ್ಚಿಲೋಟ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೆ ತುರ್ತು ಅಗತ್ಯಗಳಿಗಾಗಿ ಪುದಿಯಕಂಡಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂಞಂಗಾಡ್ ಕಡಪ್ಪುರಂ ಪಿ.ಪಿ.ಟಿ.ಎಸ್. ಅನುದಾನಿತ ಕಿರಿಯ ಪ್ರಥಮಿಕ ಶಾಲೆಗಳನ್ನು ಬಳಸಲಾಗುವುದು.

