ಕಾಸರಗೋಡು: ಮತದಾತರು ಮತಪಟ್ಟಿಯಲ್ಲಿ ತಮ್ಮ ಮಾಹಿತಿಯನ್ನು ಆನ್‍ಲೈನ್ ಮೂಲಕ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಲ್ಲಿ ಲೋಪದೋಷ, ತಪ್ಪು ಇದ್ದಲ್ಲಿ ತಿದ್ದುಪಡಿ ನಡೆಸುವ ನಿಟ್ಟಿನಲ್ಲಿ ಚುನಾವಣೆ ಆಯೋಗದ ಸೇವೆ ನ.30 ವರೆಗೆ ಲಭಿಸಲಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಅವರ ಚೇಂಬರ್‍ನಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ವೋಟರ್ ಹೆಲ್ಪ್‍ಲೈನ್ ಮೊಬೈಲ್ ಆ್ಯಪ್ ಮೂಲಕ ಚುನಾವಣೆ ಆಯೋಗ ಈ ಸೇವೆ ಒದಗಿಸಲಿದೆ. ಹೆಸರು, ವಿಳಾಸ, ಜನನ ದಿನಾಂಕ ಸಹಿತ ಮತದಾತರ ಪಟ್ಟಿಯಲ್ಲಿ ಮಾಹಿತಿಗಳಲ್ಲಿ ತಪ್ಪುಗಳಿದ್ದರೆ ಈ ಮೂಲಕ ತಿದ್ದುಪಡಿ ನಡೆಸಬಹುದಾಗಿದೆ. ಪೆÇೀಟೋ ಬದಲಿ ಅಗತ್ಯವಿದ್ದಲ್ಲಿ ನಡೆಸಬಹುದು.
ಮತದಾತರ ಮಾಹಿತಿ ಪರಿಶೀಲನೆ ಯಜ್ಞ ಕಾರ್ಯಕ್ರಮದಲ್ಲಿ ಶೇ.100 ಫಲಿತಾಂಶ ಪಡೆದ ಬೂತ್ ಮಟ್ಟದ ಅ„ಕಾರಿ ಜೋಸ್ ಟಿ.ಜಾರ್ಜ್ ಅವರನ್ನು ಅಭಿನಂದಿಸಲಾಯಿತು. ಇವರ ಹೊಣೆಗಾರಿಕೆಯ ಬೂತ್ ನಂಬ್ರ 145 ಅಡ್ಕತ್ತಬೈಲ್ ಬೀಚ್‍ನ 736 ಮಂದಿಯೂ ಚುನಾವಣೆ ಆಯೋಗದ ನೂತನ ಯೋಜನೆಯಲ್ಲಿ ಸೇರಿದ್ದಾರೆ. ಕಾರ್ಯಕ್ರಮ ಆರಂಭಿಸಿದ ಕೇವಲ 3 ದಿನಗಳಲ್ಲಿ ಶೇ.100 ಫಲಿತಾಂಶ ಈ ನಿಟ್ಟಿನಲ್ಲಿ ಲಭಿಸಿದೆ.
ಕಾಸರಗೋಡು ತಹಸೀಲ್ದಾರ್ ಎ.ವಿ.ರಾಜನ್, ಚುನಾವಣೆ ಸಹಾಯಕ ತಹಸೀಲ್ದಾರ್ ಎಂ.ಪಿ.ಅಂಬಿಳಿ, ಚುನಾವಣೆ ವಿಭಾಗ ಗುಮಾಸ್ತ ಆನಂದ್ ಎಂ.ಸೆಬಾಸ್ಟಿನ್, ಜಿಲ್ಲಾ ಪೆÇ್ರೀಗ್ರಾಮರ್ ಎ.ವಿ.ಸೀಜಾ ಮೊದಲಾದವರು ಉಪಸ್ಥಿತರಿದ್ದರು.


