ಕಾಸರಗೋಡು: ಹಿಂದುಳಿದ ಜನಾಂಗ ಅಭಿವೃದ್ಧಿ ನಿಗಮ ಜಿಲ್ಲಾ ಕಚೇರಿ ವತಿಯಿಂದ ರಾಷ್ಟ್ರೀಯ ಹಿಂದುಳಿದ ಜನಾಂಗ ಹಣಕಾಸು ಅಭಿವೃದ್ಧಿ ನಿಗಮದ ಸಹಕಾರದಿಂದ ಉದುಮದಲ್ಲಿ ಜನಜಾಗೃತಿ ಶಿಬಿರ ಮತ್ತು ಸಾಲ ವಿತರಣೆ ಕಾರ್ಯಕ್ರಮ ಜರುಗಿತು.
ವಿವಿಧ ಯೋಜನೆಗಳ ಮೂಲಕ 137 ಫಲಾನುಭವಿಗಳಿಗೆ ಸಮಾರಂಭದಲ್ಲಿ 2.5 ಕೋಟಿ ರೂ.ನ ಸಾಲವಿತರಣೆ ನಡೆಸಲಾಯಿತು. ಶಾಸಕ ಕೆ.ಕುಂಞÂರಾಮನ್ ಸಮಾರಂಭ ಉದ್ಘಾಟಿಸಿದರು. ಕೆ.ಎಸ್.ಬಿ.ಸಿ.ಡಿ.ಸಿ. ಅಧ್ಯಕ್ಷ ಟಿ.ಕೆ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ.ಮಹಮ್ಮದಾಲಿ, ಸದಸ್ಯ ಎನ್.ಚಂದ್ರನ್, ಶಿಶು ಕಲ್ಯಾಣ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಧು ಮುದಿಯಕ್ಕಾಲ್, ಪಂಚಾಯತ್ ಸಿ.ಡಿ.ಎಸ್.ಅಧ್ಯಕ್ಷೆ ಪುಷ್ಪಲತಾ, ಮಂಜೇಶ್ವರ ಗ್ರಾಮ ಪಂಚಾಯತ್ ಸಿ.ಡಿ.ಎಸ್.ಅಧ್ಯಕ್ಷೆ ಜ್ಯೋತಿಪ್ರಭಾ ಉಪಸ್ಥಿತರಿದ್ದರು.
ನಿಗಮದ ಯೋಜನೆ ಸಹಾಯಕ ಪ್ರಬಂಧಕಿ ಎ.ವಿ.ಕೃಷ್ಣ ಕುಮಾರಿ ವಿವಿಧ ಯೋಜನೆಗಳ ಕುರಿತು ತರಗತಿ ನಡೆಸಿದರು. `ಉದ್ದಿಮೆ ಅಭಿವೃದ್ಧಿ' ಎಂಬ ವಿಷಯದಲ್ಲಿ ಜಿಲ್ಲಾ ಉದ್ದಿಮೆ ಕೇಂದ್ರ ನಿವೃತ್ತ ಸಹಾಯಕ ನಿರ್ದೇಶಕ ಟಿ.ದಿನೇಶನ್ ವಿಚಾರ ಸಂಕಿರಣ ನಡೆಸಿದರು. ನಿಗಮ ಎನ್.ಎಂ.ಮೋಹನನ್ ಸ್ವಾಗತಿಸಿದರು. ಜಿಲ್ಲಾ ಪ್ರಬಂಧಕ ಪಿ.ಶ್ರೀಕುಮಾರ್ ವಂದಿಸಿದರು.
ನಿಗಮದ ಜನಪರ ಧೋರಣೆ : ಜಿಲ್ಲೆಯಲ್ಲಿ ಈ ವರೆಗೆ ವಿವಿಧ ಯೋಜನೆಗಳಿಗಾಗಿ 2 ಸಾವಿರಕ್ಕೂ ಅ„ಕ ಫಲಾನುಭವಿಗಳಿಗೆ 230 ಕೋಟಿ ರೂ., 16 ಗ್ರಾಮ ಪಂಚಾಯತ್‍ಗಳಲ್ಲಿ ಕುಟುಂಬಶ್ರೀ ಮುಖಾಂತರ ಮೈಕ್ರೋ ಕ್ರೆಡಿಟ್ ಸಾಲ ಯೋಜನೆಯ ಮೂಲಕ 10 ಕೋಟಿ ರೂ.ಗೂ ಮಿಕ್ಕು ಸಾಲ ವಿತರಿಸಲಾಗಿದೆ. ಸ್ವೋದ್ಯೋಗ, ವಿವಾಹ, ವಸತಿ ಪುನರ್ ನಿರ್ಮಾಣ, ಶಿಕ್ಷಣ ವಲಯಗಳಲ್ಲಿ ಸಾಲ ಯೋಜನೆಗಳನ್ನು ನಿಗಮ ಜಾರಿಗೊಳಿಸಿದೆ. ಜೊತೆಗೆ ಪಕ್ಷಪಾತ ಧೋರಣೆಯಿಲ್ಲದೆ, ಸುಗಮ ರೀತಿ ಚಟುವಟಿಕೆ ನಡೆಸಿ, ಕಡಿಮೆ ಬಡ್ಡಿ, ಸರಳ ವ್ಯವಹಾರ, ಮರುಪಾವತಿಗೆ ಸುಲಭ ಮಾರ್ಗ, ಸುಲಲಿತ ನಿಬಂಧನೆಗಳು, ಕಡಿಮೆ ಪೆÇ್ರಸೆಸಿಂಗ್ ಶುಲ್ಕ, ಬ್ಯಾಂಕ್‍ಗಳ ಮೂಲಕ ಮರುಪಾವತಿಗೆ ವ್ಯವಸ್ಥೆ ಇತ್ಯಾದಿಗಳು ನಿಗಮವನ್ನು ಜನಪರಗೊಳಿಸಿದೆ.


