ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಅಳವಡಿಸಿ ಮೂರು ಯೋಜನೆಗಳಿಗೆ ತಾಂತ್ರಿಕ ಅನುಮತಿ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯ ದುರಸ್ತಿ ವಿಭಾಗ ನಿರ್ವಹಣೆ ನಡೆಸುತ್ತಿರುವ ಚಾಲಿಂಗಾಲ್ ವೆಳ್ಳಿಕೋತ್ ರಸ್ತೆ ನವೀಕರಣ(ಕಿ.ಮೀ. 0/000ರಿಂದ 4/000 ವರೆಗೆ)-4 ಕೋಟಿ ರೂ., ಪನತ್ತಡಿ ಗ್ರಾಮ ಪಂಚಾಯತ್ ನ ಪಾಣತ್ತೂರು ಕಲ್ಲಪಳ್ಳಿ ರಸ್ತೆ ನವೀಕರಣ(ಕಿ.ಮೀ. 6/000ರಿಂದ 10/000 ವರೆಗೆ)-3.74 ಕೋಟಿ ರೂ., ಹಾರ್ಬರ್ ಎಂಜಿನಿಯರಿಂಗ್ ಡಿವಿಝನ್ ನಿರ್ವಹಣೆ ನಡೆಸುತ್ತಿರುವ ಮಂಗಲ್ಪಾಡಿ ಗ್ರಾಮ ಪಂಚಾಯತ್ ನ ಕಣಂಗಾಳ-ಕುರ್ಚಿಪಳ್ಳ ಮಣಿಮುಂಡ ರಸ್ತೆ ನವೀಕರಣ-4.99 ಕೋಟಿ ರೂ., ಯೋಜನೆಗಳಿಗೆ ಜಿಲ್ಲಾ ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ತಾಂತ್ರಿಕ ಅನುಮತಿ ನೀಡಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಸಮಿತಿ ಸಂಚಾಲಕ ಲೊಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ಕಾರ್ಯಕಾರಿ ಪ್ರಭಾರ ಎಂಜಿನಿಯರ್ ಕೆ.ದಯಾನಂದ, ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.

