ಮಂಜೇಶ್ವರ: ಇತ್ತೀಚೆಗೆ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮವಾದ ಸ್ಥಾನವನ್ನು ಗಿಟ್ಟಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಬಂಗ್ರ ಮಂಜೇಶ್ವರ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರಿಗೆ ಜಿಲ್ಲಾ ಮಟ್ಟಕ್ಕೆ ತೆರಳಬೇಕಾದ ಎಲ್ಲ ರೀತಿಯ ಆರ್ಥಿಕ ಸಹಾಯಗಳನ್ನು ನೀಡಿ ಸದ್ರಿ ಶಾಲೆಯ 1999 - 2000 ತಂಡದ ಹಳೆ ವಿದ್ಯಾರ್ಥಿಗಳು ನೆರವಾಗಿದ್ದಾರೆ.
ಹಳೆ ವಿದ್ಯಾರ್ಥಿಗಳಾದ ಝಕರಿಯ್ಯಾ ಶಾಲಿಮಾರ್, ಸೀದಿ ಕುಂಞ, ಜಯಂತ, ನಿತಿನ್ ಕುಮಾರ್, ಅಕ್ಬರ್ ಮೊದಲಾದವರು ಶಾಲೆಗೆ ತೆರಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಹತ್ತು ಸಾವಿರ ರೂ. ನಗದನ್ನು ಮುಖ್ಯೋಪಾದ್ಯಾಯರಿಗೆ ನೀಡಿ ಮಾದರಿಯಾಗಿದ್ದಾರೆ.
ವಿದ್ಯಾರ್ಥಿಗಳ ಕಲಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡಿರುವ ಹಳೆ ವಿದ್ಯಾರ್ಥಿಗಳ ಸೇವೆ ಶ್ಲಾಘನೀಯವೆಂದು ಶಾಲಾ ಅಧ್ಯಾಪಕರು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಳೆ ವಿದ್ಯಾರ್ಥಿಗಳನ್ನು ಅಭಿನಂಧಿಸಿದ್ದಾರೆ.


