ಕಾಸರಗೋಡು: ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಭಾಗಿಗಳಾಗಲು ಆಗಮಿಸುವ ಸ್ಪರ್ಧಾಳುಗಳು, ಅವರ ಪೆÇೀಷಕರು, ಶಿಕ್ಷಕ ವೃಂದ ಮತ್ತು ಕಲಾಪ್ರೇಮಿಗಳ ಕಣ್ಮನ ತುಂಬುವ ನಿಟ್ಟಿನಲ್ಲಿ ಅನೇಕ ವಿಶೇಷತೆಗಳನ್ನು ಹೊತ್ತ ಸ್ಟಾಲ್ ಗಳು ಕಾಂಞಗಾಡ್ ನಲ್ಲಿ ತೆರೆದುಕೊಳ್ಳಲಿವೆ.
ಪ್ರತಿ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಪ್ರಥಮ, ವಿತೀಯಬಹುಮಾನ ಪಡೆದ ಪ್ರತಿಭಾನ್ವಿತರ ಕಲಾಪ್ರಸ್ತುತಿ ಪ್ರಧಾನ ಆಕರ್ಷಣೆಯಾಗಿರುವಂತೆಯೇ, ನಗರಸಭೆಯ ಅಂಗೀಕಾರದ ಜೊತೆಗೆ ಉದ್ದಿಮೆ ಇಲಾಖೆಯ 9 ವಿಭಿನ್ನ ಸ್ಟಾಲ್ ಗಳು ಜನತೆಯನ್ನು ಸೆಳೆಯಲಿವೆ. ವೃತ್ತಿ ಪರಿಚಯ ಮೇಳ, ಕೈಟ್, ಎಸ್.ಎಸ್.ಕೆ., ಎಸ್.ಐ.ಇ.ಟಿ., ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ, ಶಿಕ್ಷಣ ಇಲಾಖೆ, ಕುಟುಂಬಶ್ರೀ, ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯ ಘಟಕ, ಜಿಲ್ಲಾ ವಾರ್ತಾ ಇಲಾಖೆ ಕಚೇರಿ, ಮಾರಾಟ ತೆರಿಗೆ ಇಲಾಖೆ, ಜಿ.ಎಸ್.ಟಿ., ಅಬಕಾರಿ ವಿಭಾಗ, ಅಗ್ನಿಶಾಮಕದಳ, ಪಡನ್ನಕ್ಕಾಡ್ ಕೃಷಿ ವಿವಿ, ಪಿ.ಎನ್.ಪಣಿಕ್ಕರ್ ಫೌಂಡೇಷನ್ ಆಯುರ್ವೇದ ಕಾಲೇಜು ಸಹಿತ ಸಂಸ್ಥೆಗಳ ವಿಶೇಷ ಸ್ಟಾಲ್ ಗಳು ಜನರನ್ನು ಆಕರ್ಷಿಸಲಿವೆ.
ಆವೆಮಣ್ಣಿನಪಾತ್ರೆಗಳು, ಶಿಶು ಕಲ್ಯಾಣ ಇಲಾಖೆಯ ಕೌನ್ಸಲಿಂಗ್ ಸೆಂಟರ್, 14 ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳು ಸ್ಥಳದಲ್ಲೇ ನಿರ್ಮಿಸುವ ಉತ್ಪನ್ನಗಳ ಪ್ರದರ್ಶನ, ಜಿಲ್ಲೆಯ ಸ್ವಂತ ಕಲಾಪ್ರಕಾರಗಳ ಪ್ರದರ್ಶನ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಬದುಕಿನ ಸಾವಿರಾರು ಚಿತ್ರಗಳ ಪ್ರದರ್ಶನ ಇತ್ಯಾದಿ ಸ್ಟಾಲ್ ಗಳಲ್ಲಿ ಇರುವುವು.
ನ.28,29,20. ಡಿ.1ರಂದು ಶಾಲಾ ವಿದ್ಯಾರ್ಥಿಗಳಿಗೂ ಈ ಪ್ರದರ್ಶನ ಈಕ್ಷಿಸುವ ಅವಕಾಶ ಇರುವುದು.


