ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ನಡೆಯಲಿರುವ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಯಕ್ಷಗಾನದಂತೆಯೇ, ನಮ್ಮ ಜಿಲ್ಲೆಯ ಸ್ವಂತ ಕಲೆಯಾಗಿರುವ ಪೂರಕ್ಕಳಿಯೂ ತಮ್ಮದೇ ಅಸ್ತಿತ್ವ ತೋರಲಿದೆ. ಚಂದ್ರಗಿರಿ ನದಿಯ ತಟದಲ್ಲಿ ಬಹು ಪ್ರಸಿದ್ಧವಾಗಿರುವ ಪೂರಂ ಉತ್ಸವದ ಭಾಗವಾಗಿ ಜಾರಿಗೆಬಂದಿರುವುದು ಈ ಪೂರಕ್ಕಳಿ.
ಹಾಡಿಗೆ ಸರಿಯಾದ ಹೆಜ್ಜೆಯಿರಿಸಿ, ಅದನ್ನೇ ತಾಳವಾಗಿ ಪರಿವರ್ತಿಸುವ ಅಂಗಕ್ರಿಯೆ ಪ್ರಧಾನ ಕಲೆ ಈ ಪೂರಕ್ಕಳಿ. ಕೇರಳದ ಪ್ರಸಿದ್ಧ ಯುದ್ಧಕಲೆ ಕಳರಿಪಯಟ್ ನೊಂದಿಗೆ ತುಂಬ ಹೋಲಿಕೆಯನ್ನು ಈ ಕಲೆ ಹೊಂದಿದೆ. ಪುರಕ್ಕಲಿಯ ಹೆಜ್ಜೆಗಾರಿಕೆ ಮತ್ತು ಕಳರಿಪಯಟ್ ನ ಹೆಜ್ಜೆಗಾರಿಕೆಯ ಸಾಮ್ಯ ಇದಕ್ಕೆ ಸಾಕ್ಷಿಯಾಗಿದೆ. ಕಲಾಪ್ರಸ್ತುತಿಗೆ ಮುನ್ನ ದೇವಸನ್ನಿಧಿಯಿಂದ ನೀಡಲಾಗುವ ತೈಲವನ್ನು ಮೈಗೆ ಲೇಪಿಸಿಕೊಂಡು ಈ ಪ್ರದರ್ಶನ ನಡೆಯುತ್ತದೆ.
ಪ್ರಧಾನವಾಗಿ 4 ವಿಭಾಗಗಳಾಗಿ ಪೂರಕ್ಕಳಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಪೂರಮಾಲ, ವನ್ ಕಳಿ, ಆಟ್ಟಂ, ತೊಳುತ್ತುಕಳಿ ಎಂಬುದು ಇಲ್ಲಿನ ಅಂಗಗಳು. ನೇರ್ಕಳಿ, ಚಾಂಞÂ ಕಳಿ, ಇರುನ್ನುಕಳಿ, ಮರಿಂ ಞÂ ಕಳಿ ಎಂಬುದು ಈ ಕಲೆಯ ಪ್ರಭೇದಗಳು.
ವಿವಿಧ ಸಂಸ್ಕøತಿಗಳ ಸಮನ್ವಯವನ್ನು ಈ ಕಲಾಪ್ರಕಾರದಲ್ಲಿ ನಾವು ಕಾಣಬಹುದು. ಶೈವ ಮತ್ತು ವೈಷ್ಣವ ಸಿದ್ಧಾಂತಗಳ ಗಾಢ ಪ್ರಭಾವ ಇಲ್ಲಿ ಕಂಡುಬರುತ್ತದೆ. ಇದೇ ಕಾರಣಕ್ಕೆ ಈ ಕಲಾಪ್ರಕಾರಕ್ಕೆ "ಶಂಕರನಾರಾಯಣೀಯಂ" ಎಂದೂ ಕರೆಯಲಾಗುತ್ತದೆ. ಇನ್ನೊಂದೆಡೆ ಜೈನ ಧರ್ಮದ ಉಲ್ಲೇಖವೂ ಕಂಡುಬರುತ್ತದೆ.
ಪೂರಕ್ಕಳಿಯ ಪಳ್ಳ್ ಎಂಬ ಭಾಗ ಕೃಷಿ ವಲಯದ ಪ್ರಾಧಾನ್ಯವನ್ನು ತಿಳಿಸುತ್ತದೆ. ಪೂರಕ್ಕಳಿಯ ಪ್ರಸ್ತುತಿ ಕೊನೆಗೊಳ್ಳುವುದು ಮಾಪಿಳ್ಳೆ ಹಾಡುಗಳನ್ನು ಆಲಾಪಿಸುವ ಸಂಪ್ರದಾಯವನ್ನು ಗಮನಿಸಿದರೆ ಮತೀಯ ಸೌಹಾರ್ದ ಸಂದೇಶವನ್ನೂ ಗುರುತಿಸಬಹುದಾಗಿದೆ.
ಪೂರಕ್ಕಳಿಯನ್ನು ಕಲಾಪ್ರಕಾರವಾಗಿ ಗುರುತಿಸಬೇಕೋ, ಅಥವಾ ಅದನ್ನೊಂದು ಕ್ರೀಡೆಯಾಗಿ ಪರಿಶೀಲಿಸಬೇಕೋ ಎಂಬ ಗೊಂದಲ ಜಿಜ್ಞಾಸುಗಳ ನಡುವೆ ಇದೆ. ಇದಕ್ಕೆ ಇಲ್ಲಿನ ತಾಳ ತ್ತು ಲಯದ ಗತಿಗಳುಪ್ರಧಾನ ಕಾರಣ. ಈಗ ಇದು ಕೇರಳದ ಉತ್ತರದ ಭಾಗದ ಜಿಲ್ಲೆಗಳ (ಮಲಬಾರ್) ಜಾನಪದ ಕಲೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಆದರೆ ಇದನ್ನು ಶಾಸ್ತ್ರೀಯ ಕಲೆ ಎಂಬ ಮನ್ನಣೆ ಸಿಗಬೇಕು ಎಂದು ವಿದ್ವಾಂಸರ ವಿಭಾಗವೊಂದು ಪ್ರಬಲ ಧ್ವನಿ ಎತ್ತುತ್ತಿದೆ. ಈಗ ಉಳಿದ ಜಿಲ್ಲೆಗಳಲ್ಲೂ ಪೂರಂ ಉತ್ಸವ ಪ್ರಸಿದ್ಧವಾಗಿರುವಂತೆಯೇ, ಪೂರಕ್ಕಳಿಯೂ ಖ್ಯಾತವಾಗಿದೆ. ರಾಜ್ಯ ಮಟ್ಟದ ಕಲೋತ್ಸವಗಳಲ್ಲಿ ಕೇರಳದ 13 ಜಿಲ್ಲೆಗಳ ತಂಡಗಳು ಸ್ಪರ್ಧಾಕಣದಲ್ಲಿರುತ್ತವೆ.


