ಕಾಸರಗೋಡು: "ಮಕ್ಕಳ ಸಂರಕ್ಷಣೆ ಸಮಾಜದ ಹೊಣೆ" ಎಂಬ ಸಂದೇಶದೊಂದಿಗೆ ಸಾಮೂಹಿಕ ಓಟ ಇಂದು(ನ.20) ಕಾಞಂಗಾಡಿನಲ್ಲಿ ನಡೆಯಲಿದೆ.
"ಚೈಲ್ಡ್ ಲೈನ್ ಸೆ ದೋಸ್ತಿ" ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಇಲಾಖೆ, ಕೇರಳ ಪೆÇಲೀಸ್ ಇಲಾಖೆ ಸಹಕಾರದೊಂದಿಗೆ ಇಂದು(ನ.20ರಂದು) ಸಂಜೆ 4 ಗಂಟೆಗೆ ಕಾಞಂಗಾಡ್ ನೋರ್ತ್ ಕೋಟಚ್ಚೇರಿಯಿಂದ ಪುದಿಯಕೋಟ ಮಾಂತೋಪ್ ಮೈದಾನ ವರೆಗೆ ಸಾಮೂಹಿಕ ಓಟ ನಡೆಯಲಿದೆ. ವಿವಿಧ ಸರಕಾರಿ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು, ರಾಜಕೀಯ-ಸಾಮಾಜಿಕ-ಸಾಂಸ್ಕøತಿಕ ಕಾರ್ಯಕರ್ತರು, ಪಾರಾ ಲೀಗಲ್ ವಾಲಿಂಟಿಯರ್ ಗಳು ಮೊದಲಾದವರು ಸಾಮೂಹಿಕ ಓಟದಲ್ಲಿ ಭಾಗವಹಿಸುವರು.

