HEALTH TIPS

ಸಾರ್ವಜನಿಕರ ಸುಸೂತ್ರ, ಸುಧಾರಿತ ಜೀವನ ಭಾರತದ ಗುರಿ : ರಾಷ್ಟ್ರಪತಿ ಕೋವಿಂದ್

     
     ನವದೆಹಲಿ: ಸರಳೀಕೃತ ವ್ಯಾಪಾರ ವ್ಯವಹಾರದಲ್ಲಿ ಶ್ರೇಯಾಂಕ ಸಾಧಿಸಿರುವ ಭಾರತ, ಎಲ್ಲಾ ನಾಗರಿಕರಿಗೆ ಸುಲಭವಾದ ಸುಧಾರಿತ ಜೀವನ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮಂಗಳವಾರ ಹೇಳಿದ್ದಾರೆ.
   ಐಐಟಿ, ಎನ್‍ಐಟಿ ಮತ್ತು ಐಐಇಎಸ್ಟಿಗಳ ನಿರ್ದೇಶಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೋವಿಂದ್, ತಂತ್ರಜ್ಞಾನದ ದೃಷ್ಟಿಕೋನದಿಂದ, ಐಐಟಿಗಳು ಮತ್ತು ಎನ್‍ಐಟಿಗಳಂತಹ ಸಂಸ್ಥೆಗಳು ಎಲ್ಲಾ ನಾಗರಿಕರಿಗೆ ಈಸ್ ಆಫ್ ಲಿವಿಂಗ್‍ಗೆ ಅತ್ಯಂತ ಮಹತ್ವದ ಕೊಡುಗೆ ನೀಡಬಲ್ಲವು ಎಂಬ ವಿಶ್ವಾಸವಿದೆ ಎಂದು ಹೇಳಿದರು."ನಗರದ ಮೂಲಸೌಕರ್ಯಗಳನ್ನು ಸುಧಾರಿಸುವುದು, ಸಮರ್ಥ ನೀರು ಸರಬರಾಜು ವ್ಯವಸ್ಥೆ ಮತ್ತು ಆರೋಗ್ಯ ವಿತರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದರ ಹೊರತಾಗಿ - ತಂತ್ರಜ್ಞಾನವು ಸರಾಸರಿ ಜೀವನದಲ್ಲಿ ಗಮನಾರ್ಹ ವ್ಯತ್ಯಾಸವನ್ನುಂಟು ಮಾಡುವ ಅಸಂಖ್ಯಾತ ಮಾರ್ಗಗಳಿವೆ ಎಂದು ಅಭಿಪ್ರಾಯಪಟ್ಟರು."ರಾಷ್ಟ್ರ ರಾಜಧಾನಿಯ ಮತ್ತು ಇತರ ಅನೇಕ ನಗರಗಳು ಗಾಳಿಯ ಗುಣಮಟ್ಟ ಎಲ್ಲಾ ಮಾನದಂಡಗಳನ್ನು ಮೀರಿ ಹದಗೆಟ್ಟಿದ್ದು ನಾವು ಹಿಂದೆಂದೂ ಎದುರಿಸದಂತಹ ಒಂದು ರೀತಿಯ ಸವಾಲನ್ನು ಎದುರಿಸುತ್ತಿದ್ದೇವೆ. ಕಳೆದ ಎರಡು ಶತಮಾನಗಳಲ್ಲಿ ಹೈಡ್ರೋಕಾರ್ಬನ್ ಶಕ್ತಿಯು ಪ್ರಪಂಚದ ಮುಖವನ್ನು ಬದಲಾಯಿಸಿತು, ಆದರೆ ಈಗ ಅದು ನಮ್ಮ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ.
   ಗಣನೀಯ ಪ್ರಮಾಣದ ಜನಸಂಖ್ಯೆಯನ್ನು ಬಡತನದಿಂದ ಹೊರಗೆ ತರಲು ಹೋರಾಡುತ್ತಿರುವ ರಾಷ್ಟ್ರಗಳಿಗೆ ಈ ಸವಾಲು ಹೆಚ್ಚಾಗಿದೆ. ಆದರೂ, ನಾವು ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಬೇಕಾಗಿದೆ "ಎಂದು ಅವರು ಹೇಳಿದರು. ಅನೇಕ ವಿಜ್ಞಾನಿಗಳು ಮತ್ತು ಫ್ಯೂಚರಾಲಜಿಸ್ಟ್‍ಗಳು ಚಿತ್ರಿಸಿದ ಡೂಮ್ಸ್ ಡೇ ಸನ್ನಿವೇಶಗಳನ್ನು ಉಲ್ಲೇಖಿಸಿ ಅವರು, "ಹೊಗೆಯುಳ್ಳ ದಿನಗಳಲ್ಲಿಮತ್ತು ನಮ್ಮ ನಗರಗಳಲ್ಲಿ ಗೋಚರತೆಯು ಕಳಪೆಯಾಗಿದ್ದು, ಭವಿಷ್ಯದ ಬಗ್ಗೆ ಆತಂಕ ಎದುರಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
    ಐಐಟಿಗಳು, ಎನ್‍ಐಟಿಗಳು ತಮ್ಮ ವಿವಿಧ ವಿಶೇಷತೆಗಳನ್ನು ಹೊಂದಿರುವ ಸಂಸ್ಥೆಗಳು ಸಾಮಾನ್ಯ ಭವಿಷ್ಯದತ್ತ ವಿದ್ಯಾರ್ಥಿಗಳು ಮತ್ತು ಸಂಶೋಧಕರಲ್ಲಿ ಸೂಕ್ಷ್ಮತೆ ಮತ್ತು ಜಾಗೃತಿ ಮೂಡಿಸಲು ಕಾಳಜಿ ವಹಿಸುತ್ತವೆ ಎಂದು ರಾಷ್ಟ್ರಪತಿ ಕೋವಿಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
   ಈ ಸಮ್ಮೇಳನವು 152 ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಕಲಿಕಾ ಸಂಸ್ಥೆಗಳಂತಹ ಸಂದರ್ಶಕರೊಂದಿಗೆ ರಾಷ್ಟ್ರಪತಿಯವರು ನಿಯಮಿತವಾಗಿ ನಡೆಸುವ ಭಾಗವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries