ಪೆರ್ಲ:ಪಡ್ರೆ ತೋಡಿನ ಪುನರುದ್ಧಾರ, ತೋಡಿನಲ್ಲಿ ವರ್ಷಪೂರ್ತಿ ನೀರು ಹರಿಸುವ ಕ್ರಿಯಾ ಯೋಜನೆಯೊಂದಿಗೆ 'ನೀರ ನೆಮ್ಮದಿಯತ್ತ ಪಡ್ರೆ' ಜಲಯೋಧರ ತಂಡದ ನೇತೃತ್ವದಲ್ಲಿ ಸ್ವರ್ಗ-ಪೆÇಯ್ಯೆ ಮತ್ತು ಪಡ್ಪು- ಪೆÇಯ್ಯೆ ತೋಡುಗಳಲ್ಲಿ ಈ ಹಿಂದೆ ಕಟ್ಟಲಾಗುತ್ತಿದ್ದ ಕಟ್ಟುತ್ತಿದ್ದ ಕಟ್ಟಗಳ ಪುನರಚನೆ. ಪ್ರಥಮ ಕಟ್ಟವನ್ನು ಉತ್ಸವ ರೂಪದಲ್ಲಿ ನಿರ್ಮಿಸಿ ಸರಣಿ ಕಟ್ಟ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದ್ದು ಇಂದು(ನ.18) 'ಕಟ್ಟ ನೋಡೋಣು ಬನ್ನಿ' ಪಡ್ರೆ ತೋಡಿನಲ್ಲಿ ಸರಣಿ ಕಟ್ಟ ನಿರ್ಮಾಣ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.
ಬೆಳಗ್ಗೆ ಗಂಟೆ 8.30ರಿಂದ ಪಳ್ಳತಮೂಲೆ ಕಟ್ಟಸ್ಥಾನದಲ್ಲಿ ಇಡಿಯಡ್ಕ ಶ್ರೀ ದುರ್ಗಾಮರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಳದ ಪ್ರಧಾನ ಅರ್ಚಕ, ವೇ.ಮೂ.ಮಧುಸೂದನ ಪುಣಿಂಚತ್ತಾಯ ಅವರ ನೇತೃತ್ವ, ಪಳ್ಳತ್ತಮೂಲೆ ಶ್ರೀರಾಮ ಭಟ್ ಅವರ ಸಹಯೋಗದಲ್ಲಿ ಗಣಪತಿ ಪೂಜೆ, ಭೂಮಿಪೂಜೆ, ಪ್ರಾರ್ಥನೆ, 9.30ಕ್ಕೆ ಲಘು ಉಪಾಹಾರ-ಪಾನೀಯ, 10ಕ್ಕೆ ಕಟ್ಟ ಕಟ್ಟುವ ಹಬ್ಬದ ರೂಪುರೇಷೆ ತಯಾರಿ, ಮುಂದಿನ ಕಟ್ಟ ಕೇಂದ್ರಿತ ಚಟುವಟಿಕೆಗಳ ವಿಚಾರ ವಿನಿಮಯ ನಡೆಯಲಿದೆ.
ಮುಂಬರುವ ದಿನಗಳಲ್ಲಿ ದರ್ಖಾಸು, ಗುಡ್ಡ ಪ್ರದೇಶದ ಸಣ್ಣ ಹಿಡುವಳಿದಾರರು ನೀರಿಂಗಿಸಲು ಮುಂದಾದಲ್ಲಿ ಆ ಮನೆಗಳ ಗುಂಪು ರಚಿಸಿ ತೆರೆದ ಬಾವಿಗಳಲ್ಲಿ ನೀರು ಹೆಚ್ಚಿಸುವ, ಖಾಸಗಿ ಜಮೀನಿನಿಂದ ಹರಿದು ತೋಡು ಸೇರುವ ಮಳೆ ನೀರನ್ನು ಅಲ್ಲಲ್ಲಿ ಇಂಗಿಸಿ ಜಲಮೂಲಗಳಲ್ಲಿ ನೀರಿನ ಮಟ್ಟ, ಲಭ್ಯತೆ ಅವಧಿ ಹೆಚ್ಚಿಸುವ ಮಾಹಿತಿ, ಮಾರ್ಗದರ್ಶನ, 2020ರಲ್ಲಿ ಎರಡೂ ತೋಡುಗಳ ಇಕ್ಕೆಲದ ಗುಡ್ಡಗಳಲ್ಲಿ ಸುರಿಯುವ ಮಳೆ ನೀರನ್ನು ಮೇಲ್ಭಾಗದಲ್ಲೇ ಅಲ್ಲಲ್ಲಿ ತಡೆದು ಇಂಗಿಸುವ ಯೋಜನೆ, ಕೃಷಿ ನೀರಾವರಿ ಮತ್ತು ಮನೆ ಬಳಕೆಯ ನೀರಿನ ಪೆÇೀಲು ಮತ್ತು ಅತಿಬಳಕೆ ತಡೆಯುವಲ್ಲಿ ಕಟ್ಟುನಿಟ್ಟಿನ ಸ್ವನಿಯಂತ್ರಣ, ಕೆರೆ, ತೋಡು, ಬಾವಿಗಳ ನೀರನ್ನಷ್ಟೇ ಬಳಸಿ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಕೊಳವೆ ಬಾವಿ ಬಳಕೆ.ಕೊಳವೆ ಬಾವಿಗಳ ಮರುಪೂರಣ, ತೋಡು ಬದಿಯಿಂದ ಆರಂಭವಾದ ಜಲಸಂರಕ್ಷಣೆ, ಜಲ ಮರುಪೂರಣ ಚಟುವಟಿಕೆಗಳ ವಿಸ್ತರಣೆ.ವಿಶಾಲ ಪ್ರದೇಶಗಳ ಜಲ ಮೂಲಗಳಿಗೆ ನೀರು ಮರು ಪೂರೈಕೆಗೆ ಕಾರಣವಾಗಿದ್ದ ಹಾಗೂ ಹಿಂದಿನ ಕಾಲದ ನೀರಿನ ಸುಸ್ಥಿತಿಗೆ ಆಧಾರವಾಗಿದ್ದ ಜಲಮೂಲಗಳ ಅಧ್ಯಯನ ಪುನಶ್ಚೇತನ ಯತ್ನ, ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಲಸಂರಕ್ಷಣೆಯ ಅರಿವು, ಜಲ ಜಾಗೃತಿ ಮೂಡಿಸುವ ಪ್ರಯತ್ನ, ಅಂತರ್ಜಲ ಮಟ್ಟ ಸುಧಾರಣೆಯ ತರಬೇತಿ ಕಾರ್ಯಕ್ರಮಗಳು ನಡೆಯಲಿದೆ.