ಕುಂಬಳೆ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಕಾಸರಗೋಡು ವಲಯ ಮಾಸಿಕ ಸಭೆ ಭಾನುವಾರ ಬಜಪೆ-ಕಿದೂರು ಮುರಳೀಧರ ಕಡಮಣ್ಣಾಯರ ಮನೆಯಲ್ಲಿ ನಡೆಯಿತು.
ಕಾಸರಗೋಡು ವಲಯಾಧ್ಯಕ್ಷ ಚಕ್ರಪಾಣಿದೇವ ಪೂಜಿತ್ತಾಯ ಅಧ್ಯಕ್ಷತೆ ವಹಿಸಿದ್ದರು.ಸದಸ್ಯರಿಂದ ಭಜನಾ ಸಂಕೀರ್ತನೆ ಹಾಗೂ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಡಿಸೆಂಬರ್ 21 ಹಾಗೂ 22 ರಂದು ನಡೆಯಲಿರುವ ಜಿಲ್ಲಾ ಶಿವಳ್ಳಿ ಸಾಂಸ್ಕøತಿಕೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಲ್ಲಿ ಈ ಸಂದರ್ಭ ಮನವಿ ಮಾಡಲಾಯಿತು. ಪ್ರಧಾನ ಸಂಚಾಲಕ ಸೀತಾರಾಮ ಕಡಮಣ್ಣಾಯರು ಸಲಹೆಗಳನ್ನು ನೀಡಿದರು. ಸತ್ಯನಾರಾಯಣ ತಂತ್ರಿ ಅವರು ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಅಭಿನಂದನೆ ಸಲ್ಲಿಸಿ ಹಾರೈಸಿದರು. ವಲಯ ಕಾರ್ಯದರ್ಶಿ ಶ್ರೀನಿವಾಸ ಕಡಮಣ್ಣಾಯ ವರದಿ ವಾಚಿಸಿದರು. ಮುರಳೀಧರ ಕಡಮಣ್ಣಾಯ ಸ್ವಾಗತಿಸಿ, ವಂದಿಸಿದರು. ಸಭೆ ನಡೆಸಲು ಅನುವುಮಾಡಿದ ಮನೆಯವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.


