ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಇತ್ತೀಚೆಗೆ ಇರಿಯಣ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕೃತ ಕಂಠಪಾಠದಲ್ಲಿ ದ್ವಿತೀಯ ಬಹುಮಾನ ಪಡೆದ ಚಿತ್ತರಂಜನ್ ಕಡಂದೇಲು. ಇವನು ಪೆರಡಾಲ ನಿವಾಸಿಯಾಗಿರುವ ಹರೀಶ್ ಕುಮಾರ್ ಕಡಂದೇಲು ಹಾಗೂ ಜ್ಯೋತ್ಸ್ನಾ ಕಡಂದೇಲು ಇವರ ಸುಪುತ್ರನಾಗಿದ್ದು ಪೆರಡಾಲ ನವಜೀವನ ಪ್ರೌಢಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ.


