ಸಮರಸ ಚಿತ್ರ ಸುದ್ದಿ: ಉಪ್ಪಳ: ಭಾನುವಾರ ಕಾಞÂಂಗಾಡಿನ ನಗರ ಸಭಾ ಭವನದಲ್ಲಿ ನಡೆದ ಎಂಟು ವರ್ಷ ಹರೆಯದ ಕೆಳಗಿನವರ ಜಿಲ್ಲಾ ಕರಾಟೆ ಚಾಂಪ್ಯನ್‍ಶಿಪ್ 2019 ಸ್ಪರ್ಧೆಯಲ್ಲಿ ವೃದ್ದಿ ದ್ವಿತೀಯ ಬಹುಮಾನವನ್ನು ಗಳಿಸಿರುತ್ತಾಳೆ. ಐಲ ಶ್ರೀಶಾರದಾ ಬೋವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಈಕೆ ಮಹೇಶ್-ಸ್ವಪ್ನಾ ದಂಪತಿಗಳ ಸುಪುತ್ರಿ. ಜಿಲ್ಲಾ ಕರಾಟೆ ಅಕಾಡೆಮಿ ಮುಖ್ಯಸ್ಥ, ಸೆನ್‍ಶುಯಿ ವಿ.ಬಿ.ಸದಾನಂದನ್ ಅವರ ಶಿಷ್ಯೆಯಾಗಿದ್ದಾಳೆ.
.......................................................................................................................................
ಸಮರಸ ಚಿತ್ರ ಸುದ್ದಿ: ಉಪ್ಪಳ: : ಭಾನುವಾರ ಕಾಞÂಂಗಾಡಿನ ನಗರ ಸಭಾ ಭವನದಲ್ಲಿ ನಡೆದ ಎಂಟು ವರ್ಷ ಹರೆಯದ ಕೆಳಗಿನವರ ಜಿಲ್ಲಾ ಕರಾಟೆ ಚಾಂಪ್ಯನ್‍ಶಿಪ್ 2019 ಸ್ಪರ್ಧೆಯಲ್ಲಿ ಸೃಷ್ಟಿ ಎಸ್ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಳು. ಐಲ ಶ್ರೀಶಾರದಾ ಬೋವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಈಕೆ ಸಂದೀಪ್- ರೋಶನಿ ದಂಪತಿಗಳ ಸುಪುತ್ರಿ. ಜಿಲ್ಲಾ ಕರಾಟೆ ಅಕಾಡೆಮಿ ಮುಖ್ಯಸ್ಥ, ಸೆನ್‍ಶುಯಿ ವಿ.ಬಿ.ಸದಾನಂದನ್ ಅವರ ಶಿಷ್ಯೆಯಾಗಿದ್ದಾಳೆ. ಇಬ್ಬರು ಪುಟಾಣಿಗಳನ್ನು ಉಪ್ಪಳದ ಖ್ಯಾತ ಜವುಳಿ ಮಾರಾಟ ಸಂಸ್ಥೆಯಾದ ಮೋಹನ ಫ್ಯಾಬ್ರಿಕ್ಸ್ ಅಭಿನಂದಿಸಿ ಶುಭಹಾರೈಸಿದೆ.



