ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ ಕಜಂಪಾಡಿ ಪ್ರದೇಶದ ಪ್ರತಿಯೊಂದು ಕುಟುಂಬವನ್ನು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳೊಂದಿಗೆ ಸೇರಿಸಿಕೊಳ್ಳುವ ಮಹತ್ತರವಾದ ಗುರಿಯೊಂದಿಗೆ ಗ್ರಾ.ಪಂ. ಸದಸ್ಯೆ ರೂಪವಾಣಿ ಆರ್ ಭಟ್ ಇವರ ನೇತೃತ್ವದಲ್ಲಿ ತರಬೇತಿ ಶಿಬಿರವನ್ನು ಸರ್ಪಮಲೆ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
ಕ್ಯಾಂಪೆÇ್ಕೀ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪ್ರಧಾನಿಗಳ ಕನಸನ್ನು ನನಸು ಮಾಡಲು ಎಲ್ಲಾ ವಾರ್ಡ್ ಮಟ್ಟದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಸಿ ಜನರಿಗೆ ಯೋಜನೆಯ ಅರಿವು ಮೂಡಿಸುವ ಅಗತ್ಯತೆಯನ್ನು ತಿಳಿಸಿದರು. ಜೊತೆಗೆ ಕಾರ್ಯಕ್ರಮದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬ್ಲಾಕ್ ಆರ್ಥಿಕ ಸಾಕ್ಷರತಾ ಕೌನ್ಸಿಲ್‍ನ ಕೃಷ್ಣ. ಕೆ ಇವರು ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಅಟಲ್ ಪೆನ್ಷನ್ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ರೂಪಿ ಕಾರ್ಡ್ ಮೊದಲಾದ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.ಗ್ರಾ.ಪಂ. ಸದಸ್ಯೆ ರೂಪವಾಣಿ ಆರ್ ಭಟ್ ಅಧ್ಯಕ್ಷತೆ ವಹಿಸಿ ಎಲ್ಲಾ ಕುಟುಂಬಗಳಿಗೂ ಈ ಯೋಜನೆಯನ್ನು ತಲುಪಿಸುವಲ್ಲಿ ಸಹಕರಿಸಬೇಕೆಂದು ವಿನಂತಿಸಿ ಪ್ರತಿಯೊಂದು ಮನೆಗೂ ಈ ಯೋಜನೆಗಳ ಫಲಾನುಭವಿಗಳಾಗಿ ಸೇರಿಕೊಂಡು ನಮ್ಮ ವಾರ್ಡ್ 100 ಶೇಕಡ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಿದ ವಾರ್ಡ ಆಗಿ ಘೋಷಿಸಲು ತಮ್ಮೆಲ್ಲರ ಸಹಕಾರ ಬೇಕೆಂದು ವಿನಂತಿಸಿದರು. ಶ್ರೀಹರಿ ಭಟ್ ಕಜಂಪಾಡಿ ಸ್ವಾಗತಿಸಿ, ಜಗದೀಶ ಸರ್ಪಮಲೆ ವಂದಿಸಿದರು. ನೂರಕ್ಕಿಂತಲೂ ಅಧಿಕ ಜನರನ್ನು ಫಲಾನುಭವಿಗಳಾಗಿ ನೋಂದಾಯಿಸಲಾಯಿತು.


