ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತಿ ಮಟ್ಟದ ಕೇರಳೋತ್ಸವ ಸೋಮವಾರ ಸಮಾರೋಪಗೊಂಡಿತು. 4 ದಿನಗಳ ಕಾಲ ವಿವಿಧ ಕ್ರೀಡಾ ಪಂದ್ಯಾಟಗಳ ಮೂಲಕ ಕೇರಳೋತ್ಸವವನ್ನು ಆಚರಿಸಲಾಯಿತು.
ಸ್ಥಳೀಯ ಬೇಕರಿ ಜಂಕ್ಷನ್ ನಲ್ಲಿ ಜರುಗಿದ ಸಮಾರೋಪ ಸಮಾರಂಭವನ್ನು ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಉದ್ಘಾಟಿಸಿದರು. ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಜೆಸಿಂತಾ ಡಿಸೋಝಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುನಿತಾ ಡಿಸೋಝಾ, ಸ್ಥಾಯೀ ಸಮಿತಿ ಅಧ್ಯಕ್ಷ ರಹಮತ್ ರಝಾಕ್, ತುಳಸಿ ಕುಮಾರಿ, ಜೆಸಿಂತಾ ಡಿಸೋಝಾ, ಸದಸ್ಯರಾದ ಹ್ಯಾರಿಸ್ ಪಾವೂರು, ಪೂರ್ಣಿಮಾ ಎಸ್.ಬೇರಿಂಜ, ವಸಂತ ಎಸ್, ಗೀತಾ.ವಿ. ಸಾಮಾನಿ, ಮೈಮೂನಾ ಅಹಮ್ಮದ್, ಸೀತಾ ಡಿ., ಇಂದಿರಾ ಕೆ., ಭಾರತಿ ಎಸ್., ಗೋಪಾಲಕೃಷ್ಣ ಪಜ್ವ, ಸದಾಶಿವ ನಾಯಕ್, ಆನಂದ ಟಿ., ಬ್ಲಾಕ್ ಪಂಚಾಯತಿ ಸದಸ್ಯ ಯು.ಸದಾಶಿವ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಚಂದ್ರಹಾಸ ಶೆಟ್ಟಿ ಮಾಸ್ತರ್, ವಸಂತರಾಜ್, ರಝಾಕ್ ಕೆದುಂಬಾಡಿ ಉಪಸ್ಥಿತರಿದ್ದರು. ಸ್ನೇಹ ಫ್ರೆಂಡ್ಸ್ ವರ್ಕಾಡಿ, ದುರ್ಗಾಪರಮೆಶ್ವರಿ, ಯುನೈಟೆಡ್ ಪಾತೂರು, ಫ್ರೆಂಡ್ಸ್ ಅಡಕಲಕಟ್ಟೆ, ಸಂತೋಷ್ ಫ್ರೆಂಡ್ಸ್ ಕ್ಲಬ್ ಪಾವಳ ಎಂಬ ಕ್ಲಬ್ ಗಳು ವಿವಿಧ ದಿನಗಳ ಪಂದ್ಯಾಟಗಳ ಉಸ್ತುವಾರಿ ವಹಿಸಿದ್ದುವು. ವಿವಿಧ ದಿನಗಳ ಚಟುವಟಿಕೆಗಳ ಸಂಚಾಲಕರಾಗಿ ಅಬ್ದುಲ್ ಮಜೀದ್ ಮಾಸ್ತರ್, ಉದಯಕುಮಾರ್ ಶೆಟ್ಟಿ, ಉಸ್ಮಾನ್ ಕೆ., ಬಿ.ಚಂದ್ರಶೇಖರ ರೈ, ಪ್ರದೀಪ್, ಮೋಹನ ಬಿ. ಸಹಕರಿಸಿದರು. ಗ್ರಾಮಪಂಚಾಯತಿ ಕಾರ್ಯದರ್ಶಿ ರಾಜೇಶ್ವರಿ ಸ್ವಾಗತಿಸಿ, ಸಹಾಯಕ ಸಂಚಾಲಕ ಜಮಾಲುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಯುವ ಸಂಚಾಲಕ ಜಯಪ್ರಕಾಶ್ ವಂದಿಸಿದರು.

