ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ಭಾನುವಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ನ.24ರಂದು ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ನಡೆಯುವ ಶಿವಳ್ಳಿ ಬ್ರಾಹ್ಮಣ ಜಿಲ್ಲಾ ಕ್ರೀಡೋತ್ಸವದಲ್ಲಿ ಹಾಗೂ ಪೆನ್ಸಿಲ್ ಚಿತ್ರರಚನೆಯಲ್ಲಿ ಮುಳ್ಳೇರಿಯ ವಲಯದ ಸದಸ್ಯರು ಭಾಗವಹಿಸುವಂತೆ ಮನವಿ ಮಾಡಲಾಯಿತು. ನ. 3ರಂದು ಮುಜುಂಗಾವಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಿವಳ್ಳಿ ಚೆಸ್ ಹಾಗೂ ಕೇರಂ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಬೆಂಗಳೂರಿನ ಕೆದಿಲಾಯ ಪ್ರತಿಷ್ಠಾನದ ಕಾಸರಗೋಡು ಜಿಲ್ಲಾ ಘಟಕವು ಬದಿಯಡ್ಕದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆಸಿದ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಕ್ಕಳ ಶತಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಮಾಣಪತ್ರ ಪಡೆದ ಆಲಂತಡ್ಕದ ಸಾಕ್ಷಿ ಕೇಕುಣ್ಣಾಯ ಹಾಗೂ ಆದ್ಯಂತ್ ಅಡೂರು ಇವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಯಲ್ಲಿ ಕೇರಳ ಆರೋಗ್ಯ ಇಲಾಖೆಯ ನಿವೃತ್ತ ಜಿಲ್ಲಾ ಸಹಾಯಕ ಆರೋಗ್ಯ ನಿರ್ದೇಶಕ ಡಾ. ರವಿಪ್ರಸಾದ್ ಬೆಳ್ಳೂರು ನಡೆದ 'ರಕ್ತದೊತ್ತಡ ಹಾಗೂ ಮಧುಮೇಹ ರೋಗ ನಿಯಂತ್ರಣ ಹಾಗೂ ಮುಂಜಾಗ್ರತೆ' ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಎಂ ಭಾರಿತ್ತಾಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿನೇಶ್ ಕುಮಾರ ಅಡಿಗ, ಶ್ರೀಪ್ರಸಾದ ಭಾರಿತ್ತಾಯ, ಮಹಾದೇವ ಕಲ್ಲೂರಾಯ, ಪದ್ಮಾ ಎಚ್, ರಾಜಾರಾಮ ಎ, ನಳಿನಾಕ್ಷಿ ಎ, ಕಮಲಾಕ್ಷಿ, ಕೃತಿಕಾ ಎ, ಆದ್ಯಂತ್ ಅಡೂರು, ಪದ್ಮಾ ಆರ್, ಲತಾ ಆರ್ ಕೆ, ಜಯಲಕ್ಷ್ಮಿ ಪಿ ತಂತ್ರಿ ಮೊದಲಾದವರು ಭಾಗವಹಿಸಿದ್ದರು. ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ ತಂತ್ರಿ ಸ್ವಾಗತಿಸಿ, ವಂದಿಸಿದರು. ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಡಿಸೆಂಬರ್ ತಿಂಗಳ ಸಭೆಯು ಡಿ.8ರಂದು ಅಪರಾಹ್ನ 2.30ರಿಂದ ಅಡೂರು ಮಹಾಲಿಂಗೇಶ್ವರ ಕ್ಷೇತ್ರದ ಪರಿಸರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

