ಮುಳ್ಳೇರಿಯ: ಮುಳ್ಳೇರಿಯ ಮಂಡಲಾಂತರ್ಗತ ಚಂದ್ರಗಿರಿವಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರದೋಷ ರುದ್ರಾಚರಣೆಯು ವಲಯ ವೈದಿಕ ಪ್ರಮುಖ ಪಯ ನರಸಿಂಹರಾಜರ ನೇತೃತ್ವದಲ್ಲಿ ವಲಯದ 21 ಮಂದಿ ರುದ್ರಪಾಠಕರ ಸಹಯೋಗದಲ್ಲಿ ರುದ್ರಾಭಿಷೇಕ-ಪೂಜಾ ಪುರಸ್ಸರ ಕೋಡಿ-ಕಾಕುಂಜೆ ಕೃಷ್ಣಕುಮಾರ ಭಟ್ ಅವರ ಮನೆಯಲ್ಲಿ ಶನಿವಾರ ನೆರವೇರಿತು.
ಪಯ ಶ್ಯಾಮ ಕುಮಾರ ಇವರ ನೇತೃತ್ವದಲ್ಲಿ "ಗೃಹೇ ಗೃಹೇ ವೇದ ನಿನಾದಃ" ನಡೆಯಿತು. ಮಾತೆಯರಿಂದ ಹಾಗೂ ಪುರುಷರಿಂದ 41 ಬಾರಿ ಶ್ರೀ ಲಕ್ಷ್ಮೀನರಸಿಂಹಕರಾವಲಂಬನ ಸ್ತೋತ್ರ ಪಠನ ನಡೆಸಲಾಯಿತು. ಮಾತೆಯರಿಂದ ಕುಂಕುಮಾರ್ಚನೆ ಜರಗಿತು. ವಲಯ ವೈದಿಕ ಪ್ರಧಾನರು ವಿಷ್ಣುಗುಪ್ತ ವಿದ್ಯಾಪೀಠ ಯೋಜನೆಯ ಬಗ್ಗೆ ಸವಿವರವಾಗಿ ತಿಳಿಸಿದರು. ಕೃಷ್ಣಕುಮಾರ ಭಟ್ ಮತ್ತು ವಲಯ ಉಪಾಧ್ಯಕ್ಷ ರಾಜಗೋಪಾಲ ಕೈಪ್ಪಂಗಳ ಇವರು ವಿಷ್ಣುಗುಪ್ತ ವಿದ್ಯಾಪೀಠ ಯೋಜನೆಗೆ ದೇಣಿಗೆ ಸಮರ್ಪಣೆ ಮಾಡಿದರು.


