HEALTH TIPS

ಮರಳು ಸಾಗಾಟದ ಲಾರಿಗಳ ಅಟ್ಟಹಾಸದಿಂದ ಕುಸಿದ ಚರಂಡಿಯ ಹೊದಿಕೆ : ಸ್ಥಳೀಯರು ಸಂಕಷ್ಟದಲ್ಲಿ

       
     ಮಂಜೇಶ್ವರ: ಮಂಜೇಶ್ವರ ಗ್ರಾ. ಪಂ. ನ ತೂಮಿನಾಡು ರಸ್ತೆಯಿಂದ ಲಕ್ಷಮ್ ವೀಡು ಕಾಲನಿ ರಸ್ತೆಯ ಚರಂಡಿಯ ಹೊದಿಕೆ ಕುಸಿದು ವಾಹನ ಸಂಚಾರಕ್ಕೆ ಹಾಗೂ ಕಾಲ್ನಡಿಗೆ ಯಾತ್ರಿಕರಿಗೆ ಅಡ್ಡಿ ಉಂಟಾಗಿದೆ.
      ಪೆÇೀಲೀಸರ ಕಣ್ತಪ್ಪಿಸಿ ಮರಳು ಶೇಖರಣೆ ನಡೆಸಲು ರಾತ್ರಿ ಕಾಲದಲ್ಲಿ ಈ ರಸ್ತೆಯಿಂದ ಮರಳು ಸಾಗಾಟದ ಟಿಪ್ಪರ್ ಲಾರಿಗಳು ಸಾಗುತ್ತಿರುವುದರಿಂದ ರಸ್ತೆಯ ಹೊದಿಕೆ ಕುಸಿದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಈ ಚರಂಡಿಯ ಹೊದಿಕೆ                                                                                                            ಕುಸಿಯುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. ಗುರುವಾರ ಮಧ್ಯಾಹ್ನ ಮರಳು ಸಾಗಾಟದ ಲಾರಿ ಸಾಗುವ ವೇಳೆ ಚರಂಡಿಯ ಹೊದಿಕೆ ಕುಸಿದಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
     ಈ ರಸ್ತೆಯಲ್ಲಿ ನಿತ್ಯವೂ ಹಲವಾರು ಶಾಲಾ  ವಾಹನಗಳು  ಹಾಗು ಇನ್ನಿತರ ಲಘು  ವಾಹನಗಳು ಸಾಗುತ್ತಿದ್ದು, ಇದೀಗ ಹೊದಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries