ಕಾಸರಗೋಡು: ಎರಡೂವರೆ ದಶಕಗಳ ನಂತರ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ನೆನಪು ಶಾಶ್ವತವಾಗಿ ಉಳಿಸುವ ಯತ್ನಗಳ ಅಂಗವಾಗಿ ವಿಭಿನ್ನ ಸ್ಮರಣ ಸಂಚಿಕೆಯೊಂದನ್ನು ಪ್ರಕಟಿಸಲು ಸಂಘಟಕ ಸಮಿತಿ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಕನ್ನಡ, ಮಲೆಯಾಳಂ ಭಾಷೆಗಳ ಲೇಖನಗಳೊಂದಿಗೆ ಇದು ಸಿದ್ಧಗೊಳ್ಳಲಿದೆ. ಕಾಸರಗೋಡಿನ ಇತಿಹಾಸ, ಸಂಸ್ಕøತಿ, ಭಾಷೆ, ಕಲೆಗಳು, ಆಂದೋಲನಗಳು ಇತ್ಯಾದಿ ವಿಚಾರಗಳ ಜೊತೆಗೆ ಕಲಾವಿದರು ರಚಿಸಿದ ಚಿತ್ರಗಳು ಇರುವುವು. ಕಲೋತ್ಸವ ಸಂಬಮಧ ವ್ಯವಸ್ಥೆಗಳು, ಸ್ಪರ್ಧೆಗಳು, ವಿಜೇತರು ಸಹಿತ ಕಲೋತ್ಸವದ ಸಮಗ್ರ ಮಾಹಿತಿ ಒಳಗೊಂಡ ಸಂಚಿಕೆ ಇದಾಗಲಿದೆ. ಮುಂದೆನಡೆಯಲಿರುವ ಕಲೋತ್ಸವಗಳ ಸಂಘಟಕ ಸಮಿತಿ ಪದಾಧಿಕಾರಗಳಿಗೆ ಮಾರ್ಗದರ್ಶಕ ಹೊತ್ತಗೆಯಾಗಿರುವ ರೀತಿ ಈ ಸಂಚಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ಸಂಚಿಕೆಯ ಪ್ರಕಟಣೆ ಮುಖ್ಯಸ್ಥ, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಜೀವನ್ ಬಾಬು ತಿಳಿಸಿದರು.
ಜಾಹೀರಾತುಗಳಿಲ್ಲದೆ ಈ ಸಂಚಿಕೆ ಹೊರಬರಲಿದೆ ಎಂಬುದು ಮತ್ತೊಂದು ಗಮನಾರ್ಹ ವಿಚಾರ. ಸ್ಮರಣ ಸಂಚಿಕೆ ಪ್ರಕಟಣೆ ಸಮಿತಿಯಲ್ಲಿ ನಾಯನ್ಮಾರುಮೂಲೆ ತನ್ ಬೀಹುಲ್ ಇಸ್ಲಾಮಿಕ್ ಹೈಯರ್ ಸೆಕೆಂಡರಿ ಶಾಲೆಯ ಸಹಾಯಕ ಮುಖ್ಯಶಿಕ್ಷಕ ಪಿ.ನಾರಾಯಣನ್ ಸಂಚಾಲಕರಾಗಿದ್ದಾರೆ. ಕಲೋತ್ಸವದ ಸಮಾರೋಪ ಸಮಾರಮಭದಲ್ಲಿ ಈ ಸಂಚಿಕೆಯ ಕರಡು ಪ್ರತಿ ಬಿಡುಗಡೆಗೊಳ್ಳಲಿದೆ.

