ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನೂತನ ಭೋಜನ ಶಾಲೆ ಮತ್ತು ಪಾಕ ಶಾಲೆಯ ಉದ್ಘಾಟನೆ ನ.20 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಬೆಳಗ್ಗೆ 8 ಕ್ಕೆ ಗಣಪತಿ ಹೋಮ, ಆ ಬಳಿಕ ನಡೆಯುವ ಸಭಾ ಕಾರ್ಯಕ್ರಮ ನಡೆಯಲಿದೆ. ಎಡನೀರು ಮಠಾ„ೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ನೂತನ ಭೋಜನ ಶಾಲೆ ಮತ್ತು ಪಾಕ ಶಾಲೆ ಉದ್ಘಾಟಿಸಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ದಿವ್ಯ ಉಪಸ್ಥಿತರಿದ್ದು ಅನುಗ್ರಹ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಧ್ಯಕ್ಷ ನಾರಾಯಣನ್ ಅಧ್ಯಕ್ಷತೆ ವಹಿಸುವರು. ನಿರ್ಮಾಣ ಸಮಿತಿ ಅಧ್ಯಕ್ಷ ಮಿತ್ತೂರು ಪುರುಷೋತ್ತಮ ಭಟ್ ಪ್ರಾಸ್ತಾವಿಕ ನುಡಿಯನ್ನಾಡುವರು. ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಓ.ಕೆ.ವಾಸು, ಮಲಬಾರ್ ದೇವಸ್ವಂ ಬೋರ್ಡ್‍ನ ಸ್ಥಾಯೀ ಸಮಿತಿ ಅಧ್ಯಕ್ಷ ಕೊಟ್ರ ವಾಸುದೇವನ್, ಎಂ.ಡಿ.ಬಿ. ಕಮೀಷನರ್ ಕೆ.ಮುರಳೀಧರನ್, ಎಂ.ಡಿ.ಬಿ. ಕಾಸರಗೋಡು ಏರಿಯಾ ಸಮಿತಿ ಅಧ್ಯಕ್ಷ ಡಾ.ಸಿ.ಕೆ.ನಾರಾಯಣನ್ ಪಣಿಕ್ಕರ್, ಖ್ಯಾತ ವಾಸ್ತು ಶಿಲ್ಪಿ ಬೆದ್ರಡ್ಕ ರಮೇಶ ಕಾರಂತ, ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ವಿಷ್ಣು ಭಟ್ ಆನೆಮಜಲು, ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರ ವಸಂತ ಪೈ ಬದಿಯಡ್ಕ, ಎಂ.ಡಿ.ಬಿ. ಕಾಸರಗೋಡು ಏರಿಯಾ ಸಮಿತಿ ಸದಸ್ಯೆ ಗೀತಾ ವಿ.ಸಾಮಾನಿ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿ.ಸಂಜೀವ ರೈ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಮುಖ್ಯ ಅರ್ಚಕ ನಾರಾಯಣ ಮಯ್ಯ, ಕಟ್ಟಡ ಸಮಿತಿಯ ಉಸ್ತುವಾರಿ ಅಭಿಯಂತರ ಸುನಿಲ್ ಕುಮಾರ್ ರೈ ಕೆಂಗಣಾಜೆ ಅವರನ್ನು ಸಮ್ಮಾನಿಸಲಾಗುವುದು. ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಂಡಾರದ ಮನೆ, ದೇವಸ್ಥಾನದ ಆಡಳಿತ ಸಮಿತಿ ಟ್ರಸ್ಟಿ ಸುಬ್ರಹ್ಮಣ್ಯ ಭಟ್ ಕೋಡುಮಾಡು ಉಪಸ್ಥಿತರಿರುವರು.
ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನೂತನ ಭೋಜನ ಶಾಲೆ ಮತ್ತು ಪಾಕ ಶಾಲೆಯ ಲೋಕಾರ್ಪಣೆ, 1 ಕ್ಕೆ ಅನ್ನಪ್ರಸಾದ ಭೋಜನ, ಅಪರಾಹ್ನ 2.30 ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗಾನಭೂಷಣ ವೆಂಕಟಕೃಷ್ಣ ಭಟ್ ಮತ್ತು ಬಳಗದವರಿಂದ `ಭಕ್ತಿಗಾನ ಸುಧಾ' ನಡೆಯಲಿದೆ.

