ಮಂಜೇಶ್ವರ: ಪಾಠ ಪುಸ್ತಕಗಳಿಂದ ಲಭಿಸುವ ಅಧ್ಯಯನಕ್ಕಿಂತಲೂ ಮಿಗಿಲಾದುದನ್ನು ಅಭ್ಯಸಿಸುವ ಅಗತ್ಯ ಇಂದಿನ ಸಮಾಜದ್ದು. ಜೊತೆಗೆ ಇತರ ಅಧ್ಯಯನಗಳು ಕಲಿಕೆಯಲ್ಲಿ ಇನ್ನಷ್ಟು ಉತ್ತೇಜನವನ್ನು ಪಠ್ಯೇತರ ಚಟುವಟಿಕೆಗಳು ನೀಡುತ್ತವೆ. ಈ ನಿಟ್ಟಿನಲ್ಲಿ ಉದ್ಯಾವರ ಜಮಾಅತ್ ಮಹಲ್ ಕಮಿಟಿಯ ಮದ್ರಸ ವಿದ್ಯಾರ್ಥಿಗಳು ಆಯೋಜಿಸಿದ ಪ್ರಾಚೀನ ಕಾಲದ ಹಾಗೂ ಇತರ ವೈವಿಧ್ಯಯಮಯ ವಸ್ತುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ವಿದ್ಯಾರ್ಥಿಗಳು ಸ್ವತಃ ನಿರ್ಮಿಸಿದ ಪೀಠೋಪಕರಣಗಳು, ಪ್ರಾಚೀನ ಕಾಲದ ಕೆಲವೊಂದು ವಸ್ತುಗಳು, ಮದ್ರಸ ಅಧ್ಯಯನಕ್ಕಿರುವ ವಸ್ತುಗಳು ಪ್ರದರ್ಶನದಲ್ಲಿ ನೋಡುಗರನ್ನು ಆಕರ್ಷಿಸಿತು.
ಎಕ್ಸ್ ಪೋ ಉದ್ಘಾಟನೆಯನ್ನು ಸಮಿತಿಯ ಹಿರಿಯ ಸದಸ್ಯ ಮಹಮೂದ್ ನಿಶಾ ನೆರವೇರಿಸಿದರು. ಮುಸ್ಲಿಂ ಮನೆಗಳ ವಿಭಾಗಗಳ ಪ್ರದರ್ಶನವನ್ನು ಬಾವ ಹಾಜಿ ಉದ್ಘಾಟಿಸಿದರು., ಇಸ್ಲಾಮ್ ಕೇರಳಕ್ಕೆ ಎಂಬ ಡೋಂಕ್ಯುಮಂಟರಿ ಉದ್ಘಾಟನೆಯನ್ನು ಮಸೀದಿ ಖತೀಬ್ ಅಬ್ದುಲ್ ಕರೀಂ ಧಾರಿಮಿ ನಿರ್ವಹಿಸಿದರು. ಮೃತ ಶರೀರದ ಪರಿಪಾಲನಾ ಮಾಹಿತಿ ಕೂಡಾ ನಡೆಯಿತು. ಅಬೂಬಕ್ಕರ್ ಹಾಜಿ, ಸಿದ್ದೀಖ್ ಮುಸ್ಲಿಯಾರ್, ಉಮರುಲ್ ಫಾರೂಕ್ ಅಮಾನಿ, ಉಮರುಲ್ ಫಾರೂಕ್ ಅಸಹರಿ, ಹನೀಫ್ ಫೈಸಿ ಮೊದಲಾದವರು ನೇತೃತ್ವ ವಹಿಸಿದ್ದರು.


