ಕಾಸರಗೋಡು: ನೆಹರೂ ಯುವ ಕೇಂದ್ರ ವತಿಯಿಂದ ಜನಜಾಗೃತಿ ಕಾರ್ಯಕ್ರಮ ಜರುಗಿತು. ವಿದ್ಯಾನಗರದ ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ನೆರೆ ಹಾವಳಿಯ ನಂತರ ಪರಿಹಾರ ಚಟುವಟಿಕೆ ನಡೆಸುವಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಸಂಘಟನೆಗಳಿಗೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಬಹುಮಾನ ವಿತರಿಸಿದರು.
ನೆಹರೂ ಯುವ ಕೇಂದ್ರ ಜಿಲ್ಲಾ ಸಂಚಾಲಕಿ ಜೆಸಿಂತಾ ಡಿ'ಸೋಜಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ನೆಹರೂ ಯುವ ಕೇಂದ್ರ ಸ್ವಯಂ ಸೇವಕ ಮಹಮ್ಮದ್ ಸಹದ್ ಉಪಸ್ಥಿತರಿದ್ದರು. ನೆಹರೂ ಯುವ ಕೇಂದ್ರ ಲೆಕ್ಕಾಧಿಕಾರಿ ಡಿ.ಎಂ.ಅನ್ನಮ್ಮ ಸ್ವಾಗತಿಸಿದರು. ಯುವ ಸ್ವಯಂ ಸೇವಕ ಪಿ.ಆರ್.ರಾಹುಲ್ ವಂದಿಸಿದರು.
ವಿವಿಧ ವಿಚಾರಗಳಲ್ಲಿ ನಾಗರಿಕ ಪೆÇಲೀಸ್ ಅಧಿಕಾರಿ ಪಿ.ಶ್ರೀನಾಥ್, ಜಿಲ್ಲಾ ಉದ್ದಿಮೆ ಕೇಂದ್ರ ನಿವೃತ್ತ ಸಹಾಯಕ ನಿರ್ದೇಶಕ ಎ.ವಿ.ಪದ್ಮನಾಭನ್, ವೆಳ್ಳಿಕೋತ್ ಇನ್‍ಸ್ಟಿಟ್ಯೂಟ್‍ನ ಉಪನ್ಯಾಸಕ ಜಯ್ ಮೋಹನ್ ಥಾಮಸ್, ಲೀಡ್ ಬ್ಯಾಂಕ್ ಪ್ರತಿನಿಧಿ ದೇವದಾಸ್ ತರಗತಿ ನಡೆಸಿದರು.


