ಕಾಸರಗೋಡು: ವೇರ್ ಹೌಸಿಂಗ್ ಅಭಿವೃದ್ಧಿ ನಿಯಂತ್ರಣ ಪ್ರಾ„ಕಾರ ವತಿಯಿಂದ ಸಿ.ಡಬ್ಲ್ಯೂ.ಸಿ. ಕೃಷಿಕರಿಗಾಗಿ ತರಬೇತಿ ಜಾಗೃತಿ ಕಾರ್ಯಕ್ರಮ ಜರುಗಿತು.
ಪಡನ್ನಕ್ಕಾಡ್ ಕೃಷಿ ಕಾಲೇಜಿನಲ್ಲಿ ಸಮಾರಂಭ ನಡೆಯಿತು. ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೃಷಿಕರು ತಮ್ಮ ಉತ್ಪನ್ನಗಳು ಹಾಳಾಗದಂತೆ ಕಾಪಿಡುವ ನಿಟ್ಟಿನಲ್ಲಿ ಬಳಸುವ ಸಿ.ಡಬ್ಲ್ಯೂ.ಸಿ. ಚಟುವಟಿಕೆಗಳ ಕುರಿತು ಗ್ರಾಮೀಣ ಮಟ್ಟದಲ್ಲೂ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 7 ದಶಕಗಳೇ ಕಳೆದರೂ ಕೃಷಿಕರಿಗೆ ಲಭಿಸಬೇಕಾದ ಸೌಲಭ್ಯಗಳು ಪೂರ್ಣರೂಪದಲ್ಲಿ ಸಿಕ್ಕಿಲ್ಲ. ಇದಕ್ಕೆ ಪ್ರಬಲ ಜಾಗೃತಿ ಮೂಡಿಸುವ ಕೃಷಿ ಯೋಜನೆಗಳ ಅಗತ್ಯವಿದೆ. ಹಾಗಾಗಿ ಕೃಷಿಕರ ಜಾಗೃತಿ ಕಾರ್ಯಕ್ರಮಗಳು ಸೀಮಿತಗೊಳ್ಳಬಾರದು. ಸೃಜನಾತ್ಮಕವಾಗಿ ನಡೆಯಬೇಕು ಎಂದವರು ತಿಳಿಸಿದರು.
ಸಿ.ಡಬ್ಲ್ಯೂ.ಸಿ. ನಿರ್ದೇಶಕ ಕೆ.ವಿ.ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಡಿಕೈ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ದಾಮೋದರನ್ ಪ್ರಧಾನ ಭಾಷಣ ಮಾಡಿದರು. ಕೃಷಿ ಕಾಲೇಜಿನ ಡೀನ್ ಪಿ.ಆರ್.ಸುರೇಶ್, ಸಿ.ಡಬ್ಲ್ಯೂ.ಸಿ. ರೀಜನಲ್ ಮೆನೇಜರ್ ಪಿ.ಆರ್.ಕೆ.ನಾಯರ್ ಉಪಸ್ಥಿತರಿದ್ದರು. ವಿವಿಧ ವಿಷಯಗಳ ಕುರಿತು ಪರಿಣತರಾದ ಅಭಿಲಾಷ್, ಎ.ಮನ್ಸೂರ್ ತರಗತಿ ನಡೆಸಿದರು. ನೀಲೇಶ್ವರ ವೇರ್ ಹೌಸ್ ದಾಸ್ತಾನುಗೃಹಕ್ಕೆ ಕೃಷಿಕರು ಭೇಟಿ ನೀಡಿದರು.

