HEALTH TIPS

ಮೆಗಾ ಉದ್ಯೋಗ ಮೇಳ- ನೌಕರಿಯ ಅವಕಾಶಗಳು ಕಡಿಮೆಯಾಗುತ್ತಿವೆ : ಸಚಿವ ಇ.ಚಂದ್ರಶೇಖರನ್


               
     ಕಾಸರಗೋಡು: ಬಹುತೇಕ ಸಾರ್ವಜನಿಕ ಸಂಸ್ಥೆಗಳು ಖಾಸಗೀಕರಣಗೊಳ್ಳುತ್ತಿರುವುದು ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಪರಿಣಾಮ ಸರಕಾರಿ-ಸಾರ್ವಜನಿಕ ಸಂಸ್ಥೆಗಳಲ್ಲಿ ನೌಕರಿಯ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
      ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗ ಶೀಲತಾ ಕೇಂದ್ರ ವತಿಯಿಂದ ಕಾಂಞಂಗಾಡ್ ನೆಹರೂ ಆಟ್ರ್ಸ್ ಆ್ಯಂಡ್ ಸಯನ್ಸ್ ಕಾಲೇಜಿನಲ್ಲಿ ಶನಿವಾರ ನಡೆದ ಮೆಗಾ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಹಿಂದೆ ಶ್ರೀಮಂತರಿಗೆ ಮಾತ್ರ ಉನ್ನತ ಶಿಕ್ಷಣ ಲಭಿಸುತ್ತಿತ್ತು. ವಿವಿಧ ಸಾಂಸ್ಕøತಿಕ ವಲಯಗಳಲ್ಲಿ ತಮ್ಮನ್ನು ಉದ್ಘಾಟಿಸಿಕೊಳ್ಳುವ ಉದ್ದೇಶದಿಂದ ಮಾತ್ರ ಕೆಲವು ಶ್ರೀಮಂತರು ಶಿಕ್ಷಣ ಪಡೆಯುತ್ತಿದ್ದರು. ಕೆಲವು ಮಂದಿ ಮಾತ್ರ ನೌಕರಿಯನ್ನು ಆಶ್ರಯಿಸುತ್ತಿದ್ದರು. ಆದರೆ 1957ರ ನಂತರ ಶಿಕ್ಷಣ ರಂಗದಲ್ಲಿ ಸಮಗ್ರ ಪ್ರಗತಿ ಸಾ„ಸಿದ ಪರಿಣಾಮ ಎಲ್ಲರಿಗೂ ಉನ್ನತ ಶಿಕ್ಷಣ ಕೈಗೆಟಕುವಂತಾಯಿತು. ಇದರಿಂದ ನೌಕರಿ ವಲಯದಲ್ಲಿ ಉದ್ಯೋಗಾರ್ಥಿಗಳ ಸಂಖ್ಯೆಯೂ ಹೆಚ್ಚಳಗೊಂಡಿತ್ತು. ಉದ್ದಿಮೆ ಕ್ಷೇತ್ರದಲ್ಲಿ ನಡೆದ ಕ್ರಾಂತಿಯ ಪರಿಣಾಮ ಖಾಸಗಿ ವಲಯದಲ್ಲೂ ನೌಕರಿ ಅವಕಾಶಗಳು ಹೆಚ್ಚಿದ್ದುವು. ಆದರೆ ಇಂದು ಉದ್ಯೋಗಾರ್ಥಿಗಳ ಸಂಖ್ಯೆ ಹೆಚ್ಚಳಗೊಂಡಿರುವುದು ಸಮಸ್ಯೆಯಾಗಿದ್ದರೂ, ಖಾಸಗಿ ವಲಯಗಳು ನೀಡುತ್ತಿರುವ ಅವಕಾಶಗಳನ್ನು ಕಡೆಗಣಿಸಕೂಡದು. ಈ ನಿಟ್ಟಿನಲ್ಲಿ ಇಂಥಾ ಉದ್ಯೋಗ ಮೇಳಗಳು ಮಹತ್ವಿಕೆ ಪಡೆಯುತ್ತವೆ ಎಂದವರು ನುಡಿದರು.
     ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ನೆಹರೂ ಕಾಲೇಜು ಪ್ರಾಂಶುಪಾಲ ಡಾ.ಟಿ.ವಿಜಯನ್, ಆಡಳಿತೆ ಸಮಿತಿ ಅಧ್ಯಕ್ಷ ಝುಬೈರ್, ಕಾರ್ಯದರ್ಶಿ ಕೆ.ರಾಮನಾಥನ್, ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಕೆ.ವಿ.ಮುರಳಿ, ಸಿ.ಸಿ.ಐ.ಜಿ.ಸಂಚಾಲಕ ವಿಜಯಕುಮಾರ್, ಆಡಳಿತೆ ಅಧಿಕಾರಿ ಪೆÇ್ರ.ಎ.ಜಿ.ನಾಯರ್, ರಕ್ಷಕ-ಶಿಕ್ಷಕ ಸಂಘ ಉಪಾಧ್ಯಕ್ಷ ಕರುಣಾಕರನ್, ಹೊಸದುರ್ಗ ಉದ್ಯೋಗ ವಿನಿಮಯ ಅಧಿಕಾರಿ ಪಿ.ಟಿ.ಜಯಪ್ರಕಾಶ್, ಉದ್ಯೋಗಾಧಿಕಾರಿ ರಮೇಶ್, ಕಾಲೇಜು ಯೂನಿಯನ್ ಅಧ್ಯಕ್ಷ ಅಭಿಜಿತ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಆರ್.ವಿನೋದ್ ಕುಮಾರ್ ಸ್ವಾಗತಿಸಿದರು. ಉದ್ಯೋಗಾಧಿಕಾರಿ (ವಿ.ಜಿ.)ಪಿ.ಎಸ್.ನೌಷಾದ್ ವಂದಿಸಿದರು.
       ಪ್ರಪ್ರಥಮ ಉದ್ಯೋಗ ಮೇಳ : ಕಾಂಞಂಗಾಡ್ ನೆಹರೂ ಕಾಲೇಜಿನಲ್ಲಿ ನಡೆದುದು ಜಿಲ್ಲಾ ಉದ್ಯೋಗ ಶೀಲತಾ ಕೇಂದ್ರ ನಡೆಸಿದ ಪ್ರಪ್ರಥಮ ಉದ್ಯೋಗ ಮೇಳವಾಗಿದೆ. ಹಣಕಾಸು, ಟೆಕ್ಸ್‍ಟೈಲ್ಸ್, ಆಟೋಮೊಬೈಲ್ ಸಹಿತ ವಲಯಗಳ 29 ಖಾಸಗಿ ಸಂಸ್ಥೆಗಳು ಉದ್ಯೋಗದಾತರಾಗಿ ಭಾಗವಹಿಸಿದ್ದುವು. 2 ಸಾವಿರಕ್ಕೂ ಅಧಿಉದ್ಯೋಗಾರ್ಥಿಗಳು ಭಾಗವಹಿಸಿದ್ದರು. 1500 ನೌಕರಿ ಅವಕಾಶಗಳು ಇಲ್ಲಿದ್ದುವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries