ಕಾಸರಗೋಡು: ಚೆನ್ನೈ ಐ.ಟಿ.ಐ. ಪ್ರವೇಶಾತಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಜಾತ್ಯತೀತ ಭಾರತ ದೇಶಕ್ಕೆ ಕಳಂಕ ತರುವ ವಿಚಾರ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಡಾ.ಷಾಹಿದಾ ಕಮಾಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಹಿಳಾ ಆಯೋಗದ ಅದಾಲತ್‍ನಲ್ಲಿ ಅವರು ಮಾತನಾಡಿದರು.
ಜಾತಿಯ ಹೆಸರಲ್ಲಿ ನಡೆದ ಹಿಂಸೆಯ ಪರಿಣಾಮ ಈ ಆತ್ಮಹತ್ಯೆ ನಡೆದಿದೆ ಎಂಬ ಸುಳಿವು ತನಿಖೆಯಲ್ಲಿ ಲಭಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯದಂತೆಯೇ ಜಾತೀಯತೆಯ ದಬ್ಬಾಳಿಕೆಯೂ ಭಾರತದಲ್ಲಿ ಹೆಚ್ಚುತ್ತಿದೆ ಎಂಬುದು ಆತಂಕಕಾರಿ ವಿಚಾರ ಎಂದವರು ನುಡಿದರು. ಕಾಸರಗೋಡು ಜಿಲ್ಲೆಯಲ್ಲಿ ದೂರುಗಳು ಕಡಿಮೆಯಾಗುತ್ತಿರುವುದು ಉತ್ತಮ ಸೂಚನೆ ಎಂದವರು ತಿಳಿಸಿದರು.
ಅದಾಲತ್‍ನಲ್ಲಿ 28 ಪ್ರಕರಣಗಳನ್ನು ಪರಿಶೀಲಿಸಲಾಗಿದ್ದು, 7 ದೂರುಗಳಿಗೆ ತೀರ್ಪು ನೀಡಲಾಗಿದೆ. ಮೂರು ಪ್ರಕರಣಗಳನ್ನು ವಿವಿಧ ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ ಎಂದವರು ನುಡಿದರು.
ವಂಚನೆಯಿಂದ ತನ್ನ ವಿವಾಹ ನಡೆಸಲಾಗಿದೆ ಎಂದು ಜಾರ್ಖಂಡ್ ನಿವಾಸಿ ಮಹಿಳೆಯೊಬ್ಬರು ನೀಡಿದ್ದ ದೂರಿನಲ್ಲಿ ಉಭಯ ಕಡೆಯವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಪತಿಯ ನಿಧನ ನಂತರ ತಮಗೆ ಲಭಿಸಬೇಕಾದ ಆಸ್ತಿಯ ಪಾಲು ಲಭಿಸದೇ ಇದ್ದ ಬಗ್ಗೆ ಮಹಿಳೆಯೊಬ್ಬರು ನೀಡಿದ್ದ ದೂರಿನಲ್ಲೂ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಲಾಗಿದೆ. ಅಕ್ರಮ ಮರಳು ಸಾಗಾಟಗಾರನೊಬ್ಬ ತಮ್ಮ 18 ವರ್ಷ ಪ್ರಾಯದ ಪುತ್ರನನ್ನು ಕೊಲೆ ನಡೆಸುವುದಾಗಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಯೋಗ ಜಿಲ್ಲಾಧಿಕಾರಿ ಮತ್ತು ಪೆÇಲೀಸರಿಗೆ ಆದೇಶಿಸಿದೆ.
ಹುಸೂರು ಶಿರಸ್ತೇದಾರ್ ಕೆ.ನಾರಾಯಣನ್, ನ್ಯಾಯವಾದಿ ಎಸ್.ರೇಣುಕಾ ದೇವಿ, ಮಹಿಳಾ ಘಟಕದ ಎಸ್.ಐ. ಎಂ.ಎ.ಶಾಂತಾ ಅದಾಲತ್‍ಗೆ ನೇತೃತ್ವ ವಹಿಸಿದ್ದರು.