ಬದಿಯಡ್ಕ: ಸಮುದಾಯ ಆರೋಗ್ಯಕೇಂದ್ರ ಬದಿಯಡ್ಕ ಮತ್ತು ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವಮಧುಮೇಹ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಬದಿಯಡ್ಕ ಹಗಲುಮನೆಯಲ್ಲಿ ಒಂದು ದಿನದ ಮಧುಮೇಹ ತಪಾಸಣೆ ಶಿಬಿರ ನಡೆಸಲಾಯಿತು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಯನ್. ಕೃಷ್ಣ ಭಟ್ ಅವರು ಶಿಬಿರವನ್ನು ಉದ್ಘಾಟಿಸಿ ವೇದಿಕೆಯ ಕಾರ್ಯಕ್ರಮಗಳಿಗೆ ತಮ್ಮ ಸರ್ವವಿಧದ ಸಹಕರಿಸುವುದಾಗಿ ಟ್ಸಿ, ಇಂತಹ ಶಿಬಿರಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆನೀಡಿದರು.
ಪಿಲಿಂಗಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಜೀವನ ಶೈಲಿ ಮತ್ತು ಆಹಾರಾಭ್ಯಾಸಗಳನ್ನು ಬದಲಿಸಿಕೊಂಡು ಮಧುಮೇಹಿಗಳು ಆರೋಗ್ಯವಂತರಾಗಿ ಬಾಳಬಹುದೆಂದು ಅಭಿಪ್ರಾಯಪಟ್ಟರು. ಚಂದ್ರಹಾಸ ರೈ ಪೆರಡಾಲ ಶುಭಾಶಂಸನೆಗೈದರು. ದಾದಿ ವಿಶಾಲಾಕ್ಷಿ, ಶಾರದಾಂಬ ಮತ್ತು ಶಾಲಿ ಶಿಬಿರವನ್ನು ನಡೆಸಿಕೊಟ್ಟರು. ಆಶಾ ಕಾರ್ಯಕರ್ತೆ ಸರೋಜಿನಿ ಚುಳ್ಳಿಕ್ಕಾನ, ಲೀಲಾವತಿ ಕನಕಪಾಡಿ, ಸರಸ್ವತಿ ಕನಕಪಾಡಿ, ಸುಮತಿ ವಿದ್ಯಾಗಿರಿ, ಶೋಭಾ ಕಾಡಮನೆ, ಸಾಜಿದಾ ಪಳ್ಳತ್ತಡ್ಕ ಮತ್ತು ಶಾರದಾ ಚೇರ್ಕೂಡ್ಲು ಸಹಕರಿಸಿದರು. ವೇದಿಕೆಯ ಕಾರ್ಯದರ್ಶಿ ಶಂಕರನಾರಾಯಣ ಭಟ್ ಸಂಪತ್ತಿಲ ಉಪಸ್ಥಿತರಿದ್ದರು. ಆರೋಗ್ಯ ಅಧಿಕಾರಿ ವಿನೋದ್ ಸ್ವಾಗತಿಸಿ, ಮೈರ್ಕಳ ನಾರಾಯಣ ಭಟ್ ವಂದಿಸಿದರು. ಪೆರ್ಮುಖ ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.


