ಕಾಸರಗೋಡು: ಕೇರಳ ತುಳು ಅಕಾಡೆಮಿಯ ವೆಬ್ ಸೈಟ್ ಲೋಕಾರ್ಪಣೆಯಾಗಿದೆ. ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಅವರು ವೆಬ್ ಸೈಟ್ ಬಿಡುಗಡೆಗೊಳಿಸಿದರು.
ಕೇರಳ ತುಳುಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಧಿಕಾರಿ ಮಧುಸೂದನನ್ ಎಂ., ತುಳು ಅಕಾಡೆಮಿ ಸದಸ್ಯರು, ಬೇರೆ ಬೇರೆ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ವಿಜಯಕುಮಾರ್ ಪಾವಲ ಸ್ವಾಗತಿಸಿದರು. ರಾಧಾಕೃಷ್ಣ ಉಳಿಯತ್ತಡ್ಕ ವಂದಿಸಿದರು.


