ಬದಿಯಡ್ಕ: ಅಸ್ತಿತ್ವಂ ಪ್ರತಿಷ್ಠಾನ ಕುಂಟಾರು ಇದರ ವತಿಯಿಂದ ಮಾದಕ ದ್ರವ್ಯ ವ್ಯಸನ ಮತ್ತು ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮ ಹಾಗೂ ಪರಿಹಾರ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರವು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬುಧವಾರ ನಡೆಯಿತು.
ಪ್ರೌಢ ವಿಭಾಗದ ಮಕ್ಕಳಿಗಾಗಿ ನಡೆದ ಕಾರ್ಯಾಗಾರದಲ್ಲಿ ಅಸ್ತಿತ್ವಂ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ಎಸ್. ಮಂಜುನಾಥ ಉಡುಪ ಹಾಗೂ ಕು.ಕೃತಿಕಾ ಕುಂಟಾರು ತರಗತಿಯನ್ನು ನಡೆಸಿಕೊಟ್ಟರು. ಟಿ.ವಿ., ಮೊಬೈಲ್ ಇತ್ಯಾದಿ ಮಾಧ್ಯಮಗಳು ಮಕ್ಕಳ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಿಳಿಸಿ, ಅದರಿಂದ ಯಾವರೀತಿ ಹೊರಬರಹುದು ಎಂಬ ಬಗ್ಗೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳ ಬಳಕೆ ಹೆಚ್ಚಾಗಿದೆ. ಧ್ಯಾನ, ಭಜನೆ ಮುಂತಾದ ಚಟುವಟಿಕೆಗಳು ನಮ್ಮನ್ನು ಅಂತಹ ದುಶ್ಚಟಗಳಿಂದ ಮುಕ್ತರನ್ನಾಗಿಸಿ ಆರೋಗ್ಯದಾಯಕ ಜೀವನಶೈಲಿ ನಡೆಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅತಿಥಿಗಳನ್ನು ಪರಿಚಯಿಸಿದರು.


