ಕಾಸರಗೋಡು: ಕೇಂದ್ರ ರೈಲ್ವೇ ಸಚಿವಾಲಯ ಅನುಮತಿ ನೀಡಿದ ತಿರುವನಂತಪುರ - ಕಾಸರಗೋಡು ಸೆಮಿ ಹೈಸ್ಪೀಡ್ ಟ್ರೈನ್ ಯೋಜನೆಯನ್ನು ಸಾಕಾರ ಗೊಳಿಸಲು ಸುಮಾರು 6000 ಮನೆ ಗಳನ್ನು ತೆರವುಗೊಳಿಸಬೇಕಾಗಿ ಬರಲಿದೆ. ಜನವಾಸ ಕಡಿಮೆ ಇರುವ ಪ್ರದೇಶದಲ್ಲಿ ರೈಲು ಹಳಿ ಹಾದುಹೋಗುವುದಿದ್ದರೂ, ಇಷ್ಟು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕಾಗಿ ಬರಲಿದೆ.
ಹಲವು ವರ್ಷಗಳ ಬೇಡಿಕೆಯಾಗಿದ್ದ ಈ ಯೋಜನೆಯಲ್ಲಿ 12 ಕಿಲೋ ಮೀಟರ್ ಮೇಲ್ಸೇತುವೆ ಮತ್ತು ಎರಡೂವರೆ ಕಿಲೋ ಮೀಟರ್ ನೀಳಕ್ಕೆ ಸುರಂಗವನ್ನೂ ನಿರ್ಮಿಸಬೇಕಾಗಿ ಬರಲಿದೆ. ಸುಮಾರು 50 ಸಾವಿರ ಮಂದಿಗೆ ಉದ್ಯೋಗ ಲಭಿಸುವ ಸಾಧ್ಯತೆಯಿದ್ದು, ವಿಶ್ವ ಮಟ್ಟದ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಈ ಮೂಲಕ ಉಪಗ್ರಹಗಳೊಂದಿಗೆ ಸಂಪರ್ಕವನ್ನು ಹೊಂದಿರುವ ನಗರಗಳೂ ಸೃಷ್ಟಿಯಾಗಲಿವೆ. ರೈಲು ಹಳಿಗೆ ಇಕ್ಕಡೆಗಳಲ್ಲಿ ಸರ್ವಿಸ್ ರಸ್ತೆಗಳು ನಿರ್ಮಾಣವಾಗಲಿರುವುದರಿಂದ ಕೆಲವು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಲಿವೆ.
ಸುಮಾರು ಐದು ವರ್ಷಗಳಲ್ಲಿ ಪೂರ್ತಿಯಾಗಲಿರುವ ಈ ಮಹತ್ವದ ಯೋಜನೆಗೆ 7720 ಕೋಟಿ ರೂ. ಅನುದಾನ ನೀಡಲು ಮತ್ತು ತಾಂತ್ರಿಕ ನೆರವು ನೀಡುವುದಾಗಿ ರೈಲ್ವೇ ಇಲಾಖೆ ಭರವಸೆ ನೀಡಿದೆ. ಈ ಯೋಜನೆ ಸಾಕಾರಗೊಳಿಸಲು ಕೇಂದ್ರ ರೈಲ್ವೇ ಇಲಾಖೆ ಶೇ.49 ಮತ್ತು ರಾಜ್ಯ ಸರ್ಕಾರ ಶೇ.51 ಹೂಡಿಕೆಯಲ್ಲಿ ರೈಲ್ವೇ ಅಭಿವೃದ್ಧಿ ನಿಗಮ (ಕೆ.ಆರ್.ಡಿ.ಸಿ.ಎಲ್) ಜವಾಬ್ದಾರಿ ವಹಿಸಿಕೊಳ್ಳಲಿದೆ. ಹೈದರಾಬಾದ್‍ನ ಜಿಯೋನೋ ಎಂಬ ಸಂಸ್ಥೆ ಸರ್ವೆ ನಡೆಸಲಿದೆ. ಕೇವಲ ಒಂದು ವಾರದಲ್ಲಿ ಸರ್ವೆ ಪೂರ್ತಿಗೊಳಿಸಲಾಗವುದು. ಐದು ಕೇಂದ್ರಗಳಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಬೇಕಾಗುತ್ತದೆ. ಲೈಟ್ ಡಿಟೆಕ್ಷನ್ ಆಂಡ್ ರೇಂಜಿಂಗ್(ಲೀಡಾರ್) ಎಂಬ ತಾಂತ್ರಿಕತೆಯನ್ನು ಬಳಸಿ ಹೆಲಿಕಾಪ್ಟರ್‍ನಲ್ಲಿ ಘಟಿಸಿದ ಲೇಸರ್ ಸ್ಕಾÂನರ್‍ಗಳೂ, ಸೆನ್ಸಾರ್‍ಗಳೂ ಬಳಸಿ ಸರ್ವೆ ನಡೆಯಲಿದೆ.
ಸರ್ವೆಗಾಗಿ ಗ್ರೌಂಡ್ ಪಾಯಿಂಟ್‍ಗಳನ್ನೂ, ಸೆಂಟರ್‍ಗಳನ್ನೂ ಈ ಹಿಂದೆಯೇ ಗುರುತಿಸಲಾಗಿತ್ತು. ಸರ್ವೆ ನಡೆಸಿದ ಬಳಿಕ ಅಲೈನ್‍ಮೆಂಟ್ ಪರಿಶೋಧಿಸಿ ತೀರ್ಮಾನ ತೆಗೆದುಕೊಂಡ ಬಳಿಕ ಸರ್ಕಾರದ ಅಂಗೀಕಾರದೊಂದಿಗೆ ಇಕ್ಕೆಡೆಗಳಲ್ಲಿ ಗಡಿಗಳನ್ನು ಗುರುತಿಸಲಾಗುವುದು.
ಸರ್ವೆಗೆ ಹೆಲಿಕಾಪ್ಟರ್:
ಕಾಸರಗೋಡು-ತಿರುವನಂತಪುರ ಸೆಮಿ ಹೈಸ್ಪೀಡ್ ರೈಲು ಹಳಿಯಾಗಿರುವ ಸಿಲ್ವರ್ ಲೈನ್‍ಗಾಗಿ ಹೆಲಿಕಾಪ್ಟರ್ ಬಳಸಿ ಸರ್ವೆ ಡಿಸೆಂಬರ ತಿಂಗಳಾಂತ್ಯದಲ್ಲಿ ನಡೆಯಲಿದೆ. ಹೆಲ್ಲಿಕಾಪ್ಟರ್‍ನ ಪರಿಶೋಧನೆ ದೆಹಲಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ರಕ್ಷಣಾ ಸಚಿವಾಲಯದ ಮತ್ತು ನಾಗರಿಕ ವ್ಯೋಮಯಾನ ಡೈರೆಕ್ಟರೇಟ್‍ನ ಅಧಿಕಾರಿಗಳು ಹೆಲಿಕಾಪ್ಟರ್‍ನ ಪರಿಶೋಧನೆ ನಡೆಸಿರುವರು. ಇದಕ್ಕಾಗಿ ಈಗಾಗಲೇ ರಕ್ಷಣಾ ಸಚಿವಾಲಯದ ಮತ್ತು ನಾಗರಿಕ ವ್ಯೋಮಯಾನ ಡೈರೆಕ್ಟರೇಟ್‍ನ ಅನುಮತಿಯು ಯೋಜನೆ ಜಾರಿಗೊಳಿಸುವ ಕೇರಳ ರೈಲ್ವೇ ಅಭಿವೃದ್ಧಿ ಕಾಪೆರ್Çರೇಶನ್ ಲಿಮಿಟೆಡ್(ಕೆಆರ್‍ಡಿಸಿಎಲ್)ಗೆ ಕಳೆದ ಅಕ್ಟೋಬರ್ ತಿಂಗಳಲ್ಲೇ ಲಭಿಸಿದೆ. ಆದರೆ ದಿಲ್ಲಿಯಲ್ಲಿ ಹವಾಮಾನ ಹಾಗೂ ತಾಂತ್ರಿಕ ಅಡಚಣೆಯಿಂದಾಗಿ ಮುಂದಿನ ಪ್ರಕ್ರಿಯೆ ವಿಳಂಬವಾಗಲು ಕಾರಣವಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.


