ಕುಂಬಳೆ: ಸರೋವರ ಕ್ಷೇತ್ರವೆಂದೇ ಪ್ರಸಿದ್ದವಾಗಿರುವ ನಾಯ್ಕಾಪು ಸಮೀಪದ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ-2019 ಕಾರ್ಯಕ್ರಮವು ಡಿ.28 ರಿಂದ ಜ.4ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಪುದಿಯಿಲ್ಲಂ ಉಣ್ಣಿಕೃಷ್ಣನ್ ನಂಬೂದಿರಿಯವರ ನೇತೃತ್ವದಲ್ಲಿ ನಡೆಯಲಿದೆ.
ಡಿ. 28 ರಂದು ಶನಿವಾರ ಸಂಜೆ 5ಕ್ಕೆ ಆಚಾರ್ಯರಿಗೆ ಪೂರ್ಣಕುಂಭ ಸ್ವಾಗತ, 5.30 ರಿಂದ ಭಾಗವತ ಸಪ್ತಾಹ ಯಜ್ಞ ಆರಂಭ, 6 ರಿಂದ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರಿಂದ ಭದ್ರದೀಪ ಪ್ರಜ್ವನೆಯೊಂದಿಗೆ ಸಪ್ತಾಹ ಆರಂಭಗೊಳ್ಳುವುದು. ಡಿ.29 ರಂದು ಭಾನುವಾರ ಬೆಳಿಗ್ಗೆ 6ಕ್ಕೆ ವಿಷ್ಣು ಸಹಸ್ರನಾಮ, ಸಾಮೂಹಿಕಾರ್ಚನೆ, ನಾಮ ಪ್ರದಕ್ಷಿಣೆ, ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ನಮಸ್ಕಾರ ಬಳಿಕ ಸೂತ ಶೌನಕ ಸಂವಾದ, ವ್ಯಾಸ ನಾರದ ಸಂವಾದ, ಕುಂತೀಸ್ತುತಿ, ಭೀಷ್ಮಸ್ತುತಿ, ಪರೀಕ್ಷಿತ ಚರಿತ್ರೆ, ಚತುಷ್ಲೋಕಿ ಭಾಗವತ, ಬ್ರಹ್ಮ ನಾರದ ಸಂವಾದ ಭಾಗಗಳ ವಾಚನ-ಪ್ರವಚನ ನಡೆಯಲಿದೆ. ಡಿ. 30 ರಂದು ಬೆಳಿಗ್ಗೆ 6ಕ್ಕೆ ವಿಷ್ಣು ಸಹಸ್ರನಾಮ, ಸಾಮೂಹಿಕಾರ್ಚನೆ, ನಾಮಪ್ರದಕ್ಷಿಣೆ, ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ನಮಸ್ಕಾರದ ಬಳಿಕ ಕಪಿಲಾವತಾರ, ಕಪಿಲೋಪದೇಶ, ದಕ್ಷಯಾಗ, ಧ್ರುವಚರಿತ್ರೆ, ಪೃಥು ಚರಿತ್ರೆ, ಪುರಂಜನೋಪಖ್ಯಾನ, ಋಷಭಾವತಾರ, ಭದ್ರಕಾಳಿ ಆವಿರ್ಭಾವ ವಾಚನ-ಪ್ರವಚನ ಹಾಗೂ ಸಂಜೆ 6ರಿಂದ ವಿದ್ಯಾಗೋಪಾಲ ಮಂತ್ರಾರ್ಚನೆ ನಡೆಯಲಿದೆ. ಡಿ. 31 ರಂದು ಬೆಳಿಗ್ಗೆ 6 ರಿಂದ ವಿಷ್ಣು ಸಹಸ್ರನಾಮ, ಸಾಮೂಹಿಕಾರ್ಚನೆ, ನಾಮಪ್ರದಕ್ಷಿಣೆ, ಪ್ರಾರ್ಥನೆ, ನಮಸ್ಕಾರದ ಬಳಿಕ ಭರತ ಚರಿತ್ರೆ, ಭೂಗೋಳ ವರ್ಣನೆ, ಅಜಾಮಿಳೋಪಖ್ಯಾನ, ವೃತಾಸುರ ಚರಿತ್ರೆ, ಪ್ರಹ್ಲಾದ ಚರಿತ್ರೆ, ನರಸಿಂಹಾವತಾರ ಕಥಾನಕಗಳ ವಾಚನ-ಪ್ರವಚನ ನಡೆಯಲಿದೆ.
ಜ.1 ರಂದು ಬೆಳಿಗ್ಗೆ 6ರಿಂದ ವಿಷ್ಣು ಸಹಸ್ರನಾಮ, ಸಾಮೂಹಿಕಾರ್ಚನೆ, ನಾಮಪ್ರದಕ್ಷಿಣೆ, ಪ್ರಾರ್ಥನೆ, ನಮಸ್ಕಾರದ ಬಳಿಕ ಗಜೇಂದ್ರಮೋಕ್ಷ, ಸಮುದ್ರಮಥನ, ಕೂರ್ಮಾವತಾರ, ವಾಮನಾವತಾರ, ಅಂಬರೀಷ ಚರಿತ್ರೆ, ಶ್ರೀರಾಮಾವತಾರ, ಪರಶುರಾಮಾವತಾರ, ಶ್ರೀಕೃಷ್ಣಾವತಾರ ವಾಚನ-ಪ್ರವಚನ ನಡೆಯಲಿದೆ. ಜ.2 ರಂದು ಬೆಳಿಗ್ಗೆ 6ರಿಂದ ವಿಷ್ಣು ಸಹಸ್ರನಾಮ, ಸಾಮೂಹಿಕಾರ್ಚನೆ, ನಾಮಪ್ರದಕ್ಷಿಣೆ, ಪ್ರಾರ್ಥನೆ, ನಮಸ್ಕಾರದ ಬಳಿಕ ಪೂತನಾಮೋಕ್ಷ, ಬಾಲಲೀಲೆಗಳು, ವತ್ಸಸ್ತೇಯ, ಗೋವರ್ಧನೋದ್ದರಣ, ಗೋವಿಂದಾಭಿಷೇಕ, ಕಾಳೀಯಮರ್ದನ, ರಾಸಕ್ರೀಡೆ, ಕಂಸವಧೆ, ಉದ್ದವದೌತ್ಯ, ರುಕ್ಮಿಣೀ ಸ್ವಯಂವರ ಕಥಾನಕಗಳ ವಾಚನ-ಪ್ರವಚನ ನಡೆಯಲಿದೆ. ಜ.3 ರಂದು ಬೆಳಿಗ್ಗೆ 6ರಿಂದ ವಿಷ್ಣು ಸಹಸ್ರನಾಮ, ಸಾಮೂಹಿಕಾರ್ಚನೆ, ನಾಮಪ್ರದಕ್ಷಿಣೆ, ಪ್ರಾರ್ಥನೆ, ನಮಸ್ಕಾರದ ಬಳಿಕ ನರಕಾಸುರವಧೆ, ಬಾಣಾಸುರ ಯುದ್ದ, ರಾಜಸೂಯ, ನಾರದಪರೀಕ್ಷೆ, ಕುಚೇಲವೃತ್ತ, ಸಂತಾನಗೋಪಾಲ, ಹಂಸಾವತಾರ ವಾಚನ-ಪ್ರವಚನ ನಡೆಯಲಿದೆ. ಸಂಜೆ 6ಕ್ಕೆ ಸರ್ವೈಶ್ವರ್ಯ ಪೂಜೆ ನಡೆಯಲಿದೆ. ಜ.4 ರಂದು ಶನಿವಾರ ಬೆಳಿಗ್ಗೆ 6ರಿಂದ ವಿಷ್ಣು ಸಹಸ್ರನಾಮ, ಸಾಮೂಹಿಕಾರ್ಚನೆ, ನಾಮಪ್ರದಕ್ಷಿಣೆ, ಪ್ರಾರ್ಥನೆ, ನಮಸ್ಕಾರದ ಬಳಿಕ ಉದ್ದವೋಪದೇಶ, ಸ್ವರ್ಗಾರೋಹಣ, ಕಲಿಕಾಲವರ್ಣಣೆ, ಪರೀಕ್ಷಿತನ ಮುಕ್ತಿ, ಮಾರ್ಕಾಂಡೇಯ ಚರಿತೆ ಭಾಗಗಳ ವಾಚನ ಪ್ರವಚನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಭಾಗವತ ಸಂಗ್ರಹ, ಕಲಶಾಭಿಷೇಕ, ಮಂಗಳಾರತಿ, ಭಾಗವತ ಯಜ್ಞ ಸಮರ್ಪಣೆ, ಯಜ್ಞಪ್ರಸಾದ ವಿತರಣೆಯೊಂದಿಗೆ ಸಪ್ತಾಹ ಸಂಪನ್ನಗೊಳ್ಳಲಿದೆ.


