ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ 2019-20ರ ಸಾಲಿನ ಕಾಸರಗೋಡು ಜಿಲ್ಲಾ ಸಾಂಸ್ಕøತಿಕೋತ್ಸವದ ಮಹಿಳಾ ವಿಭಾಗದ ಭಜನಾ ಸ್ಪರ್ಧೆಯಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾ ಮಹಿಳಾ ತಂಡ ಪ್ರಥಮ ಸ್ಥಾನ ಗಳಿಸಿದೆ. ಈ ತಂಡವು 2020 ಏಪ್ರಿಲ್ ತಿಂಗಳಲ್ಲಿ ತಿರುವನಂತಪುರದಲ್ಲಿ ನಡೆಯುವ ಸಮುದಾಯದ ವ್ಯಾಪ್ತಿಯ ಕೇರಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. ತಂಡದಲ್ಲಿ ಅಡೂರಿನ ನಂದಿತಾ ಸರಳಾಯ, ರಾಜಿತಾ ಸರಳಾಯ, ಅನನ್ಯಾ ಭಾರಿತ್ತಾಯ, ಪ್ರತಿಮಾ ಭಾರಿತ್ತಾಯ, ಪ್ರಮಿತಾ ಭಾರಿತ್ತಾಯ ಹಾಗೂ ವಂದಿತಾ ಭಾಗವಹಿಸಿದ್ದರು.
ತಂಡದ ಈ ಸಾಧನೆಗೆ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾವು ಅಭಿನಂದನೆ ಸಲ್ಲಿಸಿದೆ. ಸಾಂಸ್ಕøತಿಕೋತ್ಸವ ಹಾಗೂ ಕ್ರೀಡೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮುಳ್ಳೇರಿಯ ವಲಯದ ಎಲ್ಲಾ ಪ್ರತಿಭೆಗಳಿಗೂ ಶಿವಳ್ಳಿ ಬ್ರಾಹ್ಮಣ ಮುಳ್ಳೇರಿಯ ವಲಯ ಸಮಿತಿ ಅಭಿನಂದನೆ ಸಲ್ಲಿಸಿದೆ. ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಭಾನುವಾರ ನಡೆದ ಸಾಂಸ್ಕøತಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಶಾಲಾ ಮುಖ್ಯಸ್ಥ ಶ್ಯಾಮ್ ಭಟ್ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಜಲ್ಲಾ ಅಧ್ಯಕ್ಷೆ ಪ್ರೇಮಾ ಭಾರಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಪ್ರಸಾದ ಪಾಂಙಣ್ಣಾಯ ತಂತ್ರಿ ಆಶೀರ್ವಚನ ನೀಡಿದರು. ಬೆಳ್ತಂಗಡಿ ತುಳು ಶಿವಳ್ಳಿ ಸಭಾದ ಕಾರ್ಯದರ್ಶಿ ಮುರಳೀಕೃಷ್ಣ ಆಚಾರ್, ಶ್ರೀಭಾರತೀ ವಿದ್ಯಾಪೀಠದ ಅಧ್ಯಕ್ಷ ಎನ್ ಎನ್ ರಾವ್ ಮನ್ನಿಪ್ಪಾಡಿ, ಮುಖ್ಯ ಶಿಕ್ಷಕಿ ಚಿತ್ರಾ ಸರಸ್ವತಿ ಹಾಗೂ ಸಂಘಟನೆಯ ಜಿಲ್ಲಾ ಸಮಿತಿ ಮುಖಂಡರು ಭಾಗವಹಿಸಿದ್ದರು.


